ಸೂರತ್: 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಪೊಟ್ಟಣವನ್ನ ಮಾಲೀಕನಿಗೆ ಹಿಂದಿರುಗಿಸಿದ 15 ವರ್ಷದ ಬಾಲಕ ಹಾಗೂ ವಾಚ್‍ಮ್ಯಾನ್ ಆಗಿ ಕೆಲಸ ಮಾಡೋ ಆತನ ತಂದೆಗೆ ಸೂರತ್ ಡೈಮಂಡ್ ಅಸೋಸಿಯೇಷನ್(ಎಸ್‍ಡಿಎ) ಶನಿವಾರದಂದು ಸನ್ಮಾನ ಮಾಡಿದೆ.
ಬಾಲಕ ವಿಶಾಲ್ ಉಪಾಧ್ಯಾಯ ಹಾಗೂ ಆತನ ತಂದೆ ಫುಲ್‍ಚಂದ್ ಅವರಿಗೆ ಸನ್ಮಾನ ಮಾಡಲಾಗಿದೆ. ಅಲ್ಲದೆ ವಿಶಾಲ್‍ನ ಪ್ರಾಮಾಣಿಕತೆಗೆ ಬಹುಮಾನವಾಗಿ ಆತನ ಒಂದು ವರ್ಷದ ಶಿಕ್ಷಣದ ಖರ್ಚನ್ನು ಭರಿಸುವುದಾಗಿ ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ದಿನೇಶ್ ನವಾಡಿಯಾ ಹೇಳಿದ್ದಾರೆ.
Advertisement
Advertisement
ವಜ್ರ ವ್ಯಾಪಾರಿ ಆಗಿರೋ ಮನ್‍ಸುಖ್‍ಭಾಯ್ ಸವಾಲಿಯಾ ಕಳೆದ ಭಾನುವಾರ ಸೇಫ್ ಲಾಕರ್‍ನಿಂದ ವಜ್ರದ ಪ್ಯಾಕೆಟ್‍ಗಳನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಒಂದು ಪ್ಯಾಕೆಟ್ ಕೆಳಗೆ ಬಿದ್ದುಹೋಗಿತ್ತು. ಅಲ್ಲೇ ಹತ್ತಿರದಲ್ಲಿ ಕ್ರಿಕೆಟ್ ಆಡ್ತಿದ್ದ ಬಾಲಕ ವಿಶಾಲ್ ಆ ಪ್ಯಾಕೆಟ್ ನೋಡಿದ್ದು, ಅದನ್ನು ತೆಗೆದುಕೊಂಡು ಮನೆಗೆ ಹೋಗಿ ತನ್ನ ತಂದೆಗೆ ಅದನ್ನು ತೋರಿಸಿದ್ದ ಎಂದು ನವಾಡಿಯಾ ಹೇಳಿದ್ರು.
Advertisement
ಮರುದಿನ ಸೋಮವಾರ ಹಾಗೂ ಮಂಗಳವಾರ ರಜೆ ಇದ್ದಿದ್ದರಿಂದ ಡೈಮಂಡ್ ಮಾರುಕಟ್ಟೆ ಮುಚ್ಚಲಾಗಿತ್ತು. ಬುಧವಾರ ಅಸೋಸಿಯೇಷನ್ ತೆರೆದ ಕೂಡಲೇ ಫುಲ್‍ಚಂದ್ ವಜ್ರಗಳನ್ನ ಹಿಂದಿರುಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
Advertisement
ಮತ್ತೊಂದು ಕಡೆ ಮನ್‍ಸುಖ್‍ಭಾಯ್ ವಜ್ರಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರು. ಆ ಪ್ರದೇಶದ ಸಿಸಿಟಿವಿ ಪರಿಶೀಲಿಸಿ ಏನಾದ್ರೂ ಸುಳಿವು ಸಿಗುತ್ತಾ ಎಂದು ನೋಡಿದ್ದರು. ಆದ್ರೆ ರಜೆಯಿದ್ದ ಕಾರಣ ಸೇಫ್ ಲಾಕರ್‍ನ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ.
ಎಸ್‍ಡಿಎ ಕಚೇರಿ ತೆರೆದ ನಂತರ ಬಾಲಕ ಹಾಗೂ ಆತನ ತಂದೆ ವಜ್ರಗಳನ್ನ ಹಿಂದಿರುಗಿಸಿದ್ದು, ಬಳಿಕ ಅಸೋಸಿಯೇಷನ್‍ನವರು ಇದರ ಮಾಲೀಕನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಿದ್ದರು. ನಂತರ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಬ್ರೋಕರ್ ಸಂಪರ್ಕ ಮಾಡಿ ಅವರು ಕಳೆದುಕೊಂಡಿದ್ದ ವಜ್ರಗಳನ್ನ ಹಿಂದಿರುಗಿಸಿದ್ರು ಎಂದು ನವಾಡಿಯಾ ಹೇಳಿದ್ದಾರೆ.
ಇಡೀ ವಿಶ್ವದಲ್ಲೇ ಸೂರತ್ ಅತೀ ದೊಡ್ಡ ವಜ್ರ ಪಾಲಿಶಿಂಗ್ ಕೇಂದ್ರವಾಗಿದೆ.