ಕೈರೋ: 15 ವರ್ಷದ ಬಾಲಕನೊಬ್ಬ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ.
ಮೊಹಮ್ಮದ್ ಯಾಸೀರ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಯಾಸೀರ್ ಖಿನ್ನತೆಯಿಂದ ಬಳಲುತ್ತಿದ್ದನು ಹಾಗೂ ತನ್ನ ಜೀವನವನ್ನು ಕೊನೆಗಳಿಸಲು ನಿರ್ಧರಿಸಿದ್ದನು ಎಂದು ವರದಿಯಾಗಿದೆ.
Advertisement
ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಏನಿದೆ?
ನಾನು ನಿಜವಾಗಲೂ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ದುಃಸ್ವಪ್ನ ನನಗೆ ಸಾಕಾಗಿ ಹೋಗಿದೆ. ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ, ನಾನು ಅಪ್ರಾಪ್ತ ಹಾಗೂ ಜವಾಬ್ದಾರಿ ಇಲ್ಲದ ಬಾಲಕ ಎಂದು ತಿಳಿಯಬೇಡಿ. ಏಕೆಂದರೆ ನಾನು ಸಾಕಷ್ಟು ನೋವನ್ನು ಸಹಿಸಿಕೊಂಡಿದ್ದೇನೆ. ನನ್ನಷ್ಟು ನೋವನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ನನಗಾಗಿ ಪ್ರಾರ್ಥನೆ ಮಾಡಿ ಎಂದು ಯಾಸೀರ್ ತನ್ನ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದ.
Advertisement
Advertisement
ಯಾಸೀರ್ ನ ಈ ಸ್ಟೇಟಸ್ ನೋಡಿ ಆತನ ಸ್ನೇಹಿತರು ಹಾಗೂ ಫಾಲೋವರ್ಸ್ ಆತನಿಗೆ ಬುದ್ಧಿವಾದ ಹೇಳಿದ್ದರು. ದೇವರಲ್ಲಿ ನಂಬಿಕೆಯಿಡು. ತಾಳ್ಮೆಯಿಂದ ನಿನ್ನ ಸಮಸ್ಯೆಗಳಿಂದ ಹೊರ ಬರುವುದಕ್ಕೆ ಪ್ರಯತ್ನ ಮಾಡು ಎಂದು ಯಾಸೀರ್ ಗೆ ಬುದ್ಧಿವಾದ ಹೇಳಿದ್ದರು.
Advertisement
ತನ್ನ ಸ್ಟೇಟಸ್‍ಗೆ ಪ್ರತಿಕ್ರಿಯಿಸಿದ ತನ್ನ ಸ್ನೇಹಿತರ ಮಾತನ್ನು ಕೇಳದೆ ಭಾನುವಾರ ಜಗಾಜಿಗ್‍ನ ಮೋಯಿಸ್ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿ ಮಾಡಿದೆ.
ಯಾಸೀರ್ ಸಮುದ್ರಕ್ಕೆ ಜಿಗಿಯುವುದ್ದನ್ನು ನೋಡಿದ ಅಲ್ಲಿನ ಸ್ಥಳಿಯರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡ ಬಾಲಕ ಯಾಸೀರ್ ಎಂಬುದು ತಿಳಿದು ಬಂದಿದೆ.