ಡಿಸ್ಪೂರ್: ಪ್ರೀತಿ ಕುರುಡು ಮತ್ತು ಪ್ರೀತಿಯಲ್ಲಿ ಯಾವುದೇ ಭೇದ-ಭಾವವಿರುವುದಿಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಅಸ್ಸಾಂ ಹುಡುಗಿಯೊಬ್ಬಳು ತನ್ನ ಪ್ರೀತಿಯನ್ನು ಸಾಬೀತು ಮಾಡಲು ದೊಡ್ಡ ಸಾಹಸವನ್ನೇ ಮಾಡಿದ್ದಾಳೆ. ತನ್ನ ಪ್ರಿಯಕರ ಹೆಚ್‍ಐವಿ ಸೋಂಕಿತ ಎಂದು ತಿಳಿದಿದ್ದರೂ, ಆತನ ರಕ್ತವನ್ನು ಇಂಜೆಕ್ಟ್ ಮಾಡಿಕೊಳ್ಳುವ ಮೂಲಕ ತನಗೂ ಹೆಚ್‍ಐವಿ ಬರುವಂತೆ ಮಾಡಿಕೊಂಡಿದ್ದಾಳೆ.
ಹಜೋದಲ್ಲಿನ ಸತ್ಡೋಲಾದಲ್ಲಿರುವ ಎಚ್‍ಐವಿ ಪೀಡಿತ ಯುವಕ ಫೇಸ್‍ಬುಕ್‍ನಲ್ಲಿ ಪರಿಚಯವಾದ 15 ವರ್ಷದ ಹುಡುಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ದಿನೇ, ದಿನೇ ಅವರ ಪ್ರೀತಿ ಬಲವಾಗಿ, ಗಾಢವಾಯಿತು. ಇಬ್ಬರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಎಂದಿಗೂ ಒಬ್ಬರಿಗೊಬ್ಬರು ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿ ಈ ಹಿಂದೆ ಪ್ರಿಯಕರನೊಂದಿಗೆ ಸಾಕಷ್ಟು ಪರಾರಿಯಾಗಲು ಪ್ರಯತ್ನಿಸಿದ್ದಳು. ಆದರೆ ಪ್ರತಿ ಸಲ ಅವಳ ಮನೆಯವರು ಆಕೆಯನ್ನು ತಡೆದು ಮನೆಗೆ ವಾಪಸ್ ಕರೆದುಕೊಂಡು ಬರುತ್ತಿದ್ದರು.
Anything extreme is insanity, even love. https://t.co/smYBT7FecL
— ABDULLA MADUMOOLE ಅಬ್ದುಲ್ಲ ಮಾದುಮೂಲೆ (@AMadumool) August 8, 2022
ಆದರೆ, ಈ ಬಾರಿ ಯಾರೂ ಊಹಿಸಲು ಸಾಧ್ಯವಾಗದಂತಹ ದೊಡ್ಡ ಸಾಹಸವನ್ನು ಮಾಡಿದ್ದಾಳೆ. ಎಚ್‍ಐವಿ ಪೀಡಿತ ತನ್ನ ಪ್ರೇಮಿಯಿಂದ ತೆಗೆದ ರಕ್ತವನ್ನು ಸಿರಿಂಜ್ ಬಳಸಿ ಹುಡುಗಿ ತನ್ನ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತವರು ಮನೆಯಿಂದ 12 ವರ್ಷ ದೂರವಾಗಿದ್ದಕ್ಕೆ ದಂತವೈದ್ಯೆ ಆತ್ಮಹತ್ಯೆ?
ಸದ್ಯ ವೈದ್ಯರು ಹುಡುಗಿಗೆ ಚಿಕಿತ್ಸೆ ನೀಡುತ್ತಿದ್ದು, ಹಜೋ ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಹುಡುಗಿಯ ಕುಟುಂಬಸ್ಥರು ಆಕೆಯ ಪ್ರೇಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಚಿರತೆ ಸೆರೆಗೆ 7 ಬೋನ್, 16 ಕ್ಯಾಮೆರಾ