ರಾಯ್ಪುರ: ತೃತೀಯ ಲಿಂಗಿ ಸಮುದಾಯದವರು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸುಮಾರು 15 ಜೋಡಿಗಳು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ.
ಶನಿವಾರದಂದು ಛತ್ತಿಸ್ಗಢದಲ್ಲಿ ನಡೆದ ತೃತೀಯ ಲಿಂಗಿಗಳ ಸಾಮೂಹಿಕ ವಿವಾಹವು ಹಿಂದೂ ಸಂಪ್ರದಾಯದಂತೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸುಮಾರು 15 ಜೋಡಿ ತೃತಿಯ ಲಿಂಗಿಗಳು ಮದುವೆಯಾಗಿ ಸಪ್ತಪದಿ ತುಳಿದಿದ್ದಾರೆ. ಅಲ್ಲದೆ ಶುಕ್ರವಾರದಂದು ಈ ಜೋಡಿಗಳಿಗೆ ಮೆಹಂದಿ, ಸಂಗೀತ ಹಾಗೂ ಅರಿಶಿನ ಶಾಸ್ತ್ರವನ್ನು ಕೂಡ ಸಮುದಾಯದವರೇ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಈ ಅಪರೂಪದ ಮದುವೆಗೆ ಈ ಸಮುದಾಯದ ಮುಖಂಡರು ಸಾಕ್ಷಿಯಾಗಿ, ನವಜೋಡಿಗಳಿಗೆ ಆಶೀರ್ವಾದ ನೀಡಿದ್ದಾರೆ.
Advertisement
Advertisement
ತೃತೀಯ ಲಿಂಗಿ ಹಾಗೂ ಛತ್ತಿಸ್ಗಢದ ರಾಯ್ಗಢ ಪ್ರದೇಶದ ಮೇಯರ್ ಆಗಿರುವ ಮಧು ಕಿನ್ನರ್ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಸಮಾರಂಭದಲ್ಲಿ ಭಾಗಿಯಾಗಿದ್ದು ಬಹಳ ಖುಷಿಯಾಗಿದೆ. ನಮ್ಮಂತ ತೃತೀಯ ಲಿಂಗಿಗಳ ಸಂತೋಷ, ದು:ಖ ಕೇಳುವವರು ಇರಲಿಲ್ಲ. ಆದರೆ ಸರ್ಕಾರ ನಮ್ಮ ಬಗ್ಗೆ ಯೋಚಿಸಿ ಸಲಿಂಗ ಕಾಮ ಅಪರಾಧವಲ್ಲ ಎಂದಿದೆ. ಇದರಿಂದ ನಾವು ಕೂಡ ಮದುವೆ ಆಗಬಹುದು, ಸಂಗಾತಿ ಜೊತೆ ಚೆನ್ನಾಗಿ ಬಾಳಲು ಅನುವು ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ತೃತೀಯ ಲಿಂಗಿಗಳ ವಿವಾಹ ಟ್ರೆಂಡ್ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.