ಬಾಗ್ದಾದ್: ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ ವೇಳೆ ಮಿಲಿಟರಿ ಸರಕು ವಿಮಾನವೊಂದು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟ ಘಟನೆ ಪಶ್ಚಿಮ ಇರಾನಿನ ಫಥ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಬೋಯಿಂಗ್ 707 ಮಿಲಿಟರಿ ಸರಕು ವಿಮಾನವು ಕಿರ್ಗಿಸ್ತಾನ್‍ನ ಬಿಶ್ಕೆಕ್ ನಿಂದ ಮಾಂಸವನ್ನು ಸಾಗಿಸುತ್ತಿತ್ತು. ಆದರೆ ಫಥ್ ಏರ್ ಪೋರ್ಟ್ ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಿತ್ತು. ಫಥ್ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಮಾಡುವ ಸಮಯದಲ್ಲಿ ಪೈಲೆಟ್ ಗೆ ನಿಲ್ದಾಣ ಸರಿಯಾಗಿ ಕಾಣಿಸದ ಪರಿಣಾಮ ವಿಮಾನ ರನ್‍ವೇ ದಾಟಿ ತಡೆಗೋಡೆಗೆ ಹೊಡೆದಿದೆ. ಇದರಿಂದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸೇನೆ ಹೇಳಿದೆ.
Advertisement
Advertisement
ಈ ದುರಂತದಲ್ಲಿ ವಿಮಾನದ ಎಂಜಿನಿಯರ್ ಮಾತ್ರ ಬದುಕುಳಿದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ದುರಂತದ ಮಾಹಿತಿ ತಿಳಿದು ತಕ್ಷಣ ಫಥ್ ಮತ್ತು ಪೇಮ್ ವಿಮಾನ ನಿಲ್ದಾಣಗಳಿಗೆ ರಕ್ಷಣಾ ಪಡೆಯನ್ನು ಕಳುಹಿಸಲಾಗಿದ್ದು, ಜೊತೆಗೆ ಪೊಲೀಸರು ಹೋಗಿ ವಿಮಾನದ ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತ ಸಿಬ್ಬಂದಿಗಾಗಿ ಪರಿಶೀಲನೆ ಮಾಡುತ್ತಿದ್ದಾರೆ.
Advertisement
ಈ ವಿಮಾನವು ಕಿರ್ಗಿಸ್ತಾನ್ ಗೆ ಸೇರಿದೆ ಎಂದು ಕಿರ್ಗಿಸ್ತಾನ್ ಮಾನಾಸ್ ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv