ಶ್ರೀನಗರ: ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ 15 ಮಂದಿ ಸಾವನ್ನಪ್ಪಿದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಜೌರಿ ಜಿಲ್ಲೆಯಲ್ಲಿ ಇಂದು (ಗುರುವಾರ) ನಡೆದಿದೆ.
ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಈ ಬಸ್ ಜಮ್ಮುವಿನಿಂದ ಶಿವಖೋಡಿಗೆ ಹೋಗುತ್ತಿತ್ತು. ಬಸ್ಸಿನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಇದನ್ನೂ ಓದಿ: ಮಂಡಿಯೂರಿ ವೃದ್ಧೆ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ ವೀಡಿಯೋ ವೈರಲ್
Advertisement
Advertisement
ಶಿವಖೋಡಿಗೆ ತೆರಳುತ್ತಿದ್ದ ಬಸ್ ಅಖ್ನೂರ್ ನ ತುಂಗಿ ಮೋರ್ ಎಂಬಲ್ಲಿ ರಸ್ತೆಯಿಂದ ಜಾರಿ ಸುಮಾರು 150 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ 9 ಮಂದಿ ಮೃತಪಟ್ಟರೆ, 30 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೇ ಗಾಯಾಳುಗಳನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಎಲ್ಲರನ್ನೂ ಜಮ್ಮುವಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಹಲವು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳದಲ್ಲಿ ಎಸ್‌ಡಿಎಂ ಅಖ್ನೂರ್ ಲೇಖ್ ರಾಜ್, ಎಸ್‌ಡಿಪಿಒ ಅಖ್ನೂರ್ ಮೋಹನ್ ಶರ್ಮಾ, ಪೊಲೀಸ್ ಠಾಣೆ ಪ್ರಭಾರಿ ಅಖ್ನೂರ್ ತಾರಿಕ್ ಅಹ್ಮದ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.