– ಬೆಳಗಾವಿಯಲ್ಲಿ ಒಬ್ಬನಿಂದ 6 ಮಂದಿಗೆ ಸೋಂಕು
– ಬಿಹಾರ ಕಾರ್ಮಿಕನಿಂದ 5 ಜನರಿಗೆ ಕೊರೊನಾ
ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಶುಕ್ರವಾರ ಸಂಜೆಯಿಂದ ಈವರೆಗೆ ರಾಜ್ಯದಲ್ಲಿ 15 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೇರಿದೆ.
ಸಿಲಿಕಾನ್ ಸಿಟಿಯಲ್ಲಿ ಇಂದು ಆರು ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ಅದರಲ್ಲೂ ಬಿಹಾರ ಕಾರ್ಮಿಕನಿಂದಲೇ ಐದು ಮಂದಿಗೆ ಕೊರೊನಾ ತಗುಲಿರೋದು ದೃಢಪಟ್ಟಿದೆ. ಇನ್ನೂ ಬೆಳಗಾವಿಯಲ್ಲಿ ಒಬ್ಬ ಸೋಂಕಿತನಿಂದ ಆರು ಮಂದಿಗೆ ಕೊರೊನಾ ಬಂದಿದೆ.
Advertisement
ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.ಇದುವರೆಗೂ ರಾಜ್ಯದಲ್ಲಿ 153 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, 18 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಬೆಳಗ್ಗೆ ಬಿಡುಗಡೆಯಾದ ಸೋಂಕಿತರ ಮಾಹಿತಿ:
1. ರೋಗಿ-475: ಬೆಂಗಳೂರಿನ 34 ವರ್ಷದ ಪುರುಷ. ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್‍ಗೆ ಭೇಟಿ
2. ರೋಗಿ-476: ಬೆಂಗಳೂರಿನ 37 ವರ್ಷದ ಪುರುಷ. ರೋಗಿ 419ರ ಜೊತೆ ಸಂಪರ್ಕ
3. ರೋಗಿ-477: ಬೆಂಗಳೂರಿನ 21 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
4. ರೋಗಿ-478: ಬೆಂಗಳೂರಿನ 17 ವರ್ಷದ ಹುಡುಗ. ರೋಗಿ 419ರ ಜೊತೆ ಸಂಪರ್ಕ
5. ರೋಗಿ-479: ಬೆಂಗಳೂರಿನ 19 ವರ್ಷದ ಯುವತಿ. ರೋಗಿ 419ರ ಜೊತೆ ಸಂಪರ್ಕ
6. ರೋಗಿ-480: ಬೆಂಗಳೂರಿನ 28 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
7. ರೋಗಿ-481: ಮಂಡ್ಯದ 37 ವರ್ಷದ ಪುರುಷ. ರೋಗಿ 78ರ ಜೊತೆ ಸಂಪರ್ಕ
Advertisement
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 489
ಮೃತಪಟ್ಟವರು: 18
ಗುಣಮುಖರಾದವರು: 153
ಹೊಸ ಪ್ರಕರಣಗಳು: 15
ಇತರೆ ಮಾಹಿತಿ: ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.#ಮನೆಯಲ್ಲೇಇರಿ#KarnatakaFightsCorona@BSYBJP pic.twitter.com/DyjaQ4f0Ud
— CM of Karnataka (@CMofKarnataka) April 25, 2020
8. ರೋಗಿ-482: ಬೆಳಗಾವಿಯ ಹಿರೆಬಾಗೆವಾಡಿಯ 45 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
9. ರೋಗಿ-483: ಬೆಳಗಾವಿಯ ಹಿರೆಬಾಗೆವಾಡಿಯ 38 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
10. ರೋಗಿ-484: ಬೆಳಗಾವಿಯ ಹಿರೆಬಾಗೆವಾಡಿಯ 80 ವರ್ಷದ ವೃದ್ಧೆ. ರೋಗಿ 128ರ ದ್ವಿತೀಯ ಸಂಪರ್ಕ
11. ರೋಗಿ-485: ಬೆಳಗಾವಿಯ ಹಿರೆಬಾಗೆವಾಡಿಯ 55 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
12. ರೋಗಿ-486: ಬೆಳಗಾವಿಯ ಹಿರೆಬಾಗೆವಾಡಿಯ 42 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
13. ರೋಗಿ-487: ಬೆಳಗಾವಿಯ ಹಿರೆಬಾಗೆವಾಡಿಯ 39 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
14. ರೋಗಿ-488: ಚಿಕ್ಕಬಳ್ಳಾಪುರದ 18 ವರ್ಷದ ಹುಡುಗ. ಆಂಧ್ರ ಪ್ರದೇಶದ ಹಿಂದೂಪುರ ಮತ್ತು ಅನಂತಪುರಕ್ಕೆ ಭೇಟಿ
15. ರೋಗಿ-489: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 33 ವರ್ಷದ ಮಹಿಳೆ. ರೋಗಿ 409ರೊಂದಿಗೆ ಸಂಪರ್ಕ