ಕುಕ್ಕೀಸ್‌ಗಳನ್ನು ಅಂಗಡಿಗಳಿಂದ ತರುವುದಕ್ಕಿಂತಲೂ ಮನೆಯಲ್ಲಿ ಮಾಡಿ ಸವಿಯುವುದು ಹೆಚ್ಚು ಮಜವೆನಿಸುತ್ತದೆ. ಕುಕ್ಕೀಸ್‌ಗಳನ್ನು ಮಾಡಲು ಹೆಚ್ಚೇನೂ ಶ್ರಮಪಡುವ ಅಗತ್ಯವಿಲ್ಲ. ಕೆಲವೇ ಪದಾರ್ಥಗಳನ್ನು ಬಳಸಿ ಸಿಂಪಲ್ ಆಗಿಯೂ ಅತ್ಯಂತ ರುಚಿಕರವಾಗಿಯೂ ಕುಕ್ಕೀಸ್‌ಗಳನ್ನು ಮಾಡಬಹುದು. ಈ ಹಿಂದೆಯೂ ಸ್ವಾದಿಷ್ಟವಾದ ಕುಕ್ಕೀಸ್ ರೆಸಿಪಿಗಳನ್ನು ನಾವು ಹಂಚಿಕೊಂಡಿದ್ದೇವೆ. ಇಂದು ಕೂಡಾ ಸ್ವಲ್ಪ ಭಿನ್ನವಾಗಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದಂತಹ ಬಾಳೆಹಣ್ಣು ಹಾಗೂ ಓಟ್ಸ್ ಕುಕ್ಕೀಸ್ ರೆಸಿಪಿಯನ್ನು ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಓಟ್ಸ್ – ಒಂದೂವರೆ ಕಪ್
ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
ಅಡುಗೆ ಸೋಡಾ – ಅರ್ಧ ಟೀಸ್ಪೂನ್
ಕತ್ತರಿಸಿದ ಬಾದಾಮಿ – 2 ಟೀಸ್ಪೂನ್
ಮಾಗಿದ ಬಾಳೆಹಣ್ಣು – 2
ವಿನೆಗರ್ – 1 ಟೀಸ್ಪೂನ್
ಚಾಕ್ಲೇಟ್ ಚಿಪ್ಸ್ – ಕಾಲು ಕಪ್ ಇದನ್ನೂ ಓದಿ: ಪ್ಯಾನ್‌ಕೇಕ್ ಗೊತ್ತು, ಡ್ಯಾನಿಶ್ ಪ್ಯಾನ್‌ಕೇಕ್ ಎಂದಾದ್ರೂ ಮಾಡಿದ್ದೀರಾ?
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 350 ಡಿಗ್ರಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
* ಒಂದು ಬಟ್ಟಲಿಗೆ ಓಟ್ಸ್, ಬೇಕಿಂಗ್ ಪೌಡರ್, ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ.
* ಅದಕ್ಕೆ ಮಾಗಿದ ಬಾಳೆಹಣ್ಣನ್ನು ಕಿವುಚಿ ಹಾಕಿ, ವಿನೆಗರ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ಚಾಕ್ಲೇಟ್ ಚಿಪ್ಸ್ ಅನ್ನು ಸೇರಿಸಿ, ಮಿಶ್ರಣವನ್ನು ಬೇಕಿಂಗ್ ಶೀಟ್‌ನಲ್ಲಿ ಕುಕ್ಕೀಸ್ ಆಕಾರದಲ್ಲಿ ಸುರಿದುಕೊಳ್ಳಿ.
* ಕುಕ್ಕೀಸ್‌ಗಳನ್ನು ಓವನ್‌ನಲ್ಲಿ ಇಟ್ಟು, ಸುಮಾರು 10-15 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
* ಇದೀಗ ರುಚಿಕರ ಬಾಳೆಹಣ್ಣು ಹಾಗೂ ಓಟ್ಸ್ ಕುಕ್ಕೀಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಬೇಕರಿಯಲ್ಲಿ ಸಿಗುವ ಡೋನಟ್ ಮನೆಯಲ್ಲೂ ಮಾಡ್ಬೋದು ತುಂಬಾ ಸುಲಭವಾಗಿ