ಕಾಬೂಲ್: ಅಫ್ಘಾನಿಸ್ತಾನದ ಮಿಲಿಟರಿ ಆಸ್ಪತ್ರೆಯಲ್ಲಿ ಸಂಭವಿಸಿದ ಅವಳಿ ಸ್ಫೋಟದಲ್ಲಿ ಸುಮಾರು 15 ಮಂದಿ ಮೃತಪಟ್ಟಿದ್ದು, 34 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ ಗುಂಡಿನ ದಾಳಿಯೂ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Advertisement
೪೦೦ ಹಾಸಿಗೆಗಳಿರುವ ಸರ್ದಾರ್ ಮೊಹಮ್ಮದ್ ದಾವುದ್ ಖಾನ್ ಆಸ್ಪತ್ರೆ ಬಳಿ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯೀದ್ ಖೋಸ್ಟಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ನಂಬರ್ – ಕರೆ ಮಾಡಿ 2 ಲಕ್ಷ ಕಳ್ಕೊಂಡ
Advertisement
ಕೇಂದ್ರ ಕಾಬೂಲ್‌ನ ವಜೀರ್ ಅಕ್ಬರ್ ಖಾನ್ ಪ್ರದೇಶದ ಹಿಂದಿನ ರಾಜತಾಂತ್ರಿಕ ವಲಯದ ಬಳಿ ಸಂಭವಿಸಿದ ಸ್ಫೋಟದಿಂದ ಹೊಮ್ಮಿದ ಹೊಗೆಯ ಚಿತ್ರಗಳನ್ನು ಸ್ಥಳೀಯರು ಹಂಚಿಕೊಂಡಿದ್ದಾರೆ.
Advertisement
Advertisement
“ಇಸ್ಲಾಮಿಕ್ ಸ್ಟೇಟ್ ದಾಳಿಕೋರರು ಆಸ್ಪತ್ರೆಗೆ ನುಗ್ಗಿ ಭದ್ರತಾ ಪಡೆಗಳೊಂದಿಗೆ ಘರ್ಷಣೆಗಿಳಿದಿದ್ದರು” ಎಂದು ಬಕ್ತಾರ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
ಆಗಸ್ಟ್‌ನಲ್ಲಿ ಅಮೆರಿಕ ತನ್ನ ಸೇನಾಪಡೆಯನ್ನು ಅಫ್ಗಾನಿಸ್ತಾನದಿಂದ ವಾಪಸ್ ಕರೆಸಿಕೊಂಡ ನಂತರ ತಾಲಿಬಾನಿಗಳು ದೇಶದಲ್ಲಿ ಸಂಪೂರ್ಣ ಪ್ರಾಬಲ್ಯ ಸ್ಥಾಪಿಸಿದರು. ದಶಕಗಳ ನಂತರ ತಮ್ಮ ಆಡಳಿತವನ್ನು ಮರುಸ್ಥಾಪಿಸಲು ಭದ್ರತಾ ಪಡೆಗಳನ್ನು ದುರ್ಬಲಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ದೊಡ್ಡ ಸ್ಫೋಟವಾಯಿತು. ಇದಾದ ಒಂದೆರಡು ನಿಮಿಷಗಳ ಕಾಲ ಗುಂಡಿನ ಸದ್ದು ಕೇಳಿಸಿತು. ಸುಮಾರು ಹತ್ತು ನಿಮಿಷಗಳ ನಂತರ ಎರಡನೇ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಸ್ಥಳದಿಂದ ತಪ್ಪಿಸಿಕೊಂಡಿರುವ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.