– ನಾಲ್ವರ ಸ್ಥಿತಿ ಗಂಭೀರ
ಭುವನೇಶ್ವರ್: ಒಡಿಶಾದ (Odisha) ಪುರಿಯಲ್ಲಿ (Puri) ಭಗವಾನ್ ಜಗನ್ನಾಥ ದೇವಾಲಯದಲ್ಲಿ ಚಂದನ್ ಜಾತ್ರಾ ಉತ್ಸವದ (Lord Jagannath’s Chandan Jatra festival) ವೇಳೆ ಪಟಾಕಿಯ ರಾಶಿಗೆ ಬೆಂಕಿ ತಗುಲಿ ಸ್ಫೋಟಗೊಂಡ (Firecrackers exploded) ಪರಿಣಾಮ 15 ಜನ ಗಾಯಗೊಂಡಿದ್ದು, ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಜಾತ್ರಾ ಉತ್ಸವದ ವೇಳೆ ಭಕ್ತರು ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ರಾಶಿ ಹಾಕಿದ್ದ ಪಟಾಕಿಗೆ ಬೆಂಕಿ ತಗುಲಿದೆ. ಇದು ಸ್ಫೋಟಕ್ಕೆ ಕಾರಣವಾಯಿತು. ಅವಘಡದ ವೇಳೆ ನೂರಾರು ಭಕ್ತರು ಜಲಧಾರೆ ನರೇಂದ್ರ ಪುಷ್ಕರಿಣಿಯ ದಡದಲ್ಲಿ ನಿಂತಿದ್ದರು. ಪಟಾಕಿ ರಾಶಿಗೆ ಬೆಂಕಿ ತಗಲುತ್ತಿದ್ದಂತೆ ಕೆಲವರು ಜೀವ ಉಳಿಸಿಕೊಳ್ಳಲು ನದಿಗೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಬೆದರಿಕೆ: ಅಪ್ರಾಪ್ತ ವಶಕ್ಕೆ
ಘಟನೆ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಪುರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 88 ಕೋಟಿ ಅಕ್ರಮ – ಎಂಡಿ, ಲೆಕ್ಕಾಧಿಕಾರಿ ಅಮಾನತು