ನವದೆಹಲಿ: ಹವಾಮಾನ ಹಠಾತ್ ಬದಲಾವಣೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಶುಕ್ರವಾರ ಸಂಜೆ ಭಾರೀ ಧೂಳಿನ ಬಿರುಗಾಳಿ (Dust Storm) ಅವಾಂತರ ಸೃಷ್ಟಿಸಿತು.
ಸಂಜೆ ಮೋಡ ಮುಸುಕಿದ ವಾತಾವರಣ ಕಂಡುಬಂತು. ಈ ಬೆನ್ನಲ್ಲೇ ಬಿರುಗಾಳಿ ವೇಗವಾಗಿ ಬೀಸಿತು. ಧೂಳು ಮಿಶ್ರಿತ ಗಾಳಿಗೆ ಜನರು ಕಂಗಾಲಾದರು. ಎಕ್ಸ್‌ಪ್ರೆಸ್ ಹೈವೇಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
धूल भरी आंधी नई दिल्ली रेलवे स्टेशन में …#Delhirains #Delhi#Delhirain @SkymetWeather @Mpalawat pic.twitter.com/6sWM5a3x65
— Gaurav (@I_gaurav_) April 11, 2025
ಗುರುಗ್ರಾಮದಲ್ಲಿ ಕಬ್ಬಿಣದ ಸರಳು ಬಿದ್ದು ಕಾರು ಜಖಂ ಆಯಿತು. ಹಲವೆಡೆ ಲಘು ಮಳೆಗೆ ಮರಗಳು ಧರೆಗುರುಳಿವೆ. ಬಿರುಗಾಳಿ ಹಿನ್ನೆಲೆ 15 ವಿಮಾನಗಳು ಡೈವರ್ಟ್ ಆಗಿವೆ. ಹಲವು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.
ಬಿರುಗಾಳಿ ತುಂಬಾ ಹಾನಿ ಉಂಟುಮಾಡಬಹುದು. ಜನರು ಮನೆ ಒಳಗಡೆಯೇ ಇರಿ. ಹೊರಗಡೆ ಪ್ರಯಾಣ ಮಾಡದಿರಿ ಎಂದು ಹವಾಮಾನ ಕಚೇರಿ ಎಚ್ಚರಿಕೆ ನೀಡಿದೆ. ಮರಗಳ ಕೆಳಗೆ ಆಶ್ರಯ ಪಡೆಯಬೇಡಿ, ಕಾಂಕ್ರೀಟ್ ಮಹಡಿಗಳ ಮೇಲೆ ಮಲಗಬೇಡಿ ಮತ್ತು ಕಾಂಕ್ರೀಟ್ ಗೋಡೆಗಳ ಮೇಲೆ ಒರಗಬೇಡಿ. ವಿದ್ಯುತ್ ಉಪಕರಣಗಳನ್ನು ಅನ್‌ಪ್ಲಗ್ ಮಾಡಿ ಎಂದು ಸಲಹೆ ನೀಡಿದೆ.