ಚಿಕ್ಕಬಳ್ಳಾಪುರ: ಕ್ರೈಸ್ತ ಧರ್ಮಕ್ಕೆ (Christianity) ಮತಾಂತರವಾಗಿದ್ದ 15 ಕುಟುಂಬಗಳ 50ಕ್ಕೂ ಹೆಚ್ಚು ಮಂದಿಯನ್ನ ಮರಳಿ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಅಂದಹಾಗೆ ಗೌರಿಬಿದನೂರು ತಾಲೂಕಿನ ನಾಗಸಂದ್ರ, ಗಾಂಧಿನಗರ, ಕದಿರೇನಹಳ್ಳಿ ಸೇರಿದಂತೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ 15 ಕುಟುಂಬಗಳ 50ಕ್ಕೂ ಹೆಚ್ಚು ಮಂದಿ ಕ್ರಿಶ್ಚಿಯನ್ ಧರ್ಮದ ಆಚಾರಗಳನ್ನ ಪಾಲನೆ ಮಾಡುತ್ತಿದ್ದರು. ದೇವಾಲಯಗಳಿಗೆ ಹೋಗೋದನ್ನೇ ಮರೆತಿದ್ದ ಜನರ ಮನ ಪರಿವರ್ತನೆ ಮಾಡಿದ ಬಿಜೆಪಿ ಮುಖಂಡ ರವಿನಾರಾಯಣರೆಡ್ಡಿ ಎಲ್ಲರನೂ ಮರಳಿ ಘರ್ ವಾಪಾಸಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ‘ಲೋಕಾ’ ಶಾಕ್ – ಬೀದರ್, ಮೈಸೂರು ಸೇರಿ ಹಲವೆಡೆ ದಾಳಿ
ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿ ಹೋಮ ಹವನ ಮಾಡಿ ಘರ್ ವಾಪ್ಸಿ ಕಾರ್ಯಕ್ರಮ ನಡೆಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ವೀರರಾಣಿ ಅಬ್ಬಕ್ಕ ಹೆಸರಿನ ಮೆರಿಟೈಮ್ ವಿವಿ ಸ್ಥಾಪನೆಗೆ ಕ್ಯಾ.ಚೌಟ ಮನವಿ
ಇನ್ನೂ ಅನ್ಯ ಧರ್ಮಗಳಿಗೆ ಮತಾಂತರ ಆದವರನ್ನ ಮೂಲ ಧರ್ಮಕ್ಕೆ ಕರೆತರುವ ಕಾಯಕ ಸದಾ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಈಗಲೂ ಇವರನ್ನ ಕರೆತರಲಾಗಿದೆ. ಮಂದಿನ ದಿನಗಳಲ್ಲಿ ಮತ್ತಷ್ಟು ಜನರ ಮನಪರಿವರ್ತನೆ ಮಾಡಿ ಘರ್ ವಾಪ್ಸಿ ಕಾರ್ಯ ಮುಂದುವರಿಸಲಾಗುವುದು ಎಂದ ರವಿನಾರಾಯಣರೆಡ್ಡಿ ತಿಳಿಸಿದರು. ಇದನ್ನೂ ಓದಿ: ಸಂಸತ್ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್ ಯಾದವ್ ಸಭೆ – ಕೆರಳಿದ ಬಿಜೆಪಿ