– ರಾಜ್ಯದಲ್ಲಿ 761ಕ್ಕೇರಿದ ಸೋಂಕಿತರ ಸಂಖ್ಯೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿಂದು ಕೊರೊನಾ ಸ್ಫೋಟವಾಗಿದ್ದು, ಇಂದು ಒಂದೇ ದಿನ 15 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 171ಕ್ಕೆ ಏರಿಕೆ ಕಂಡಿದ್ದು, ರಾಜ್ಯದಲ್ಲಿ 761ಕ್ಕೆ ತಲುಪಿದೆ. ಲಾಕ್‍ಡೌನ್ ಸಡಿಲಿಕೆ ಬಳಿಕ ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಇಂದು ಸಂಜೆ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಮೀಡಿಯಾ ಬುಲೆಟಿನ್ ಪ್ರಕಾರ, ಬೆಂಗಳೂರಿನಲ್ಲಿ 7 (ಶಿವಾಜಿ ನಗರ 4, ಪಾದರಾಯನಪುರ 3), ಬೆಳಗಾವಿಯಲ್ಲಿ 11, ದಾವಣಗೆರೆಯಲ್ಲಿ 14, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 5 ತಿಂಗಳ ಕಂದಮ್ಮ ಹಾಗೂ 3 ವರ್ಷದ ಬಾಲಕಿ ಸೇರಿ 12, ಚಿತ್ರದುರ್ಗದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿತ್ತು.
ಇಂದು ಬೆಂಗಳೂರಿನ ಪಾದರಾಯನಪುರದಲ್ಲಿ 6, ಹೊಂಗಸಂದ್ರ 5, ಶಿವಾಜಿನಗರ 4 ಪ್ರಕರಣಗಳು ಬೆಳಕಿಗೆ ಬಂದಿವೆ. ಪಾದರಾಯನಪುರದಲ್ಲಿ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದ್ದು, ಮಹಿಳೆಯ ಸಂಪರ್ಕದಲ್ಲಿದ್ದ 25 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.