ಇಸ್ಲಾಮಾಬಾದ್: ಬಾಂಗ್ಲಾದೇಶ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಹರಾಜಿಗಿಟ್ಟಿದ್ದ ಬ್ಯಾಟನ್ನು ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ 20,000 ಡಾಲರ್ (15,17,540 ರೂ.)ಗೆ ಖರೀದಿಸಿದ್ದಾರೆ.
ಹೆಮ್ಮಾರಿ ಕೊರೊನಾ ವೈರಸ್ ಬಾಂಗ್ಲಾದೇಶ ಜನರನ್ನು ಕೂಡ ಕಂಗೆಡಿಸಿದೆ. ದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ಪರಿಹಾರಕ್ಕಾಗಿ ಮುಷ್ಫಿಕರ್ ತಮ್ಮ ಫೇವರಿಟ್ ಕ್ರಿಕೆಟ್ ಬ್ಯಾಟನ್ನು ಹರಾಜಿಗಿಟ್ಟಿದ್ದರು. ಇದನ್ನೂ ಓದಿ: ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ
Advertisement
The auction for my first double hundred bat will start on Saturday, May 09 at 10 pm Bangladesh Time. For details, visit https://t.co/H0wFgGKb2a or https://t.co/TxNyyz2YSU pic.twitter.com/I2OWf5xkz2
— Mushfiqur Rahim (@mushfiqur15) May 7, 2020
Advertisement
ಮುಷ್ಫಿಕರ್ ರಹೀಮ್ 2013ರಲ್ಲಿ ಶ್ರೀಲಂಕಾ ವಿರುದ್ಧ ದ್ವಿಶತಕ ಸಿಡಿಸಿದ್ದಾಗ ಬಳಸಿದ್ದ ಬ್ಯಾಟನ್ನು ಕಳೆದ ತಿಂಗಳು ಹರಾಜಿಗಿಟ್ಟಿದ್ದರು. ಇದರಿಂದ ಬಂದ ಹಣವನ್ನು ಬಾಂಗ್ಲಾದೇಶದಲ್ಲಿ ಕೊರೊನಾ ವಿರುದ್ಧದ ಪರಿಹಾರಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದ್ದರು. ಸದ್ಯ ಬ್ಯಾಟನ್ನು ಅಫ್ರಿದಿ ಖರೀದಿಸಿದ್ದಾರೆ. ಈ ವಿಚಾರವನ್ನು ಮುಷ್ಫಿಕರ್ ರಹೀಮ್ ಇಎಸ್‍ಪಿಎನ್ ಕ್ರಿಕ್ ಇನ್ಫೋ ಜೊತೆ ಹಂಚಿಕೊಂಡಿದ್ದಾರೆ.
Advertisement
“ನಾನು ಹರಾಜಿಗಿಟ್ಟಿದ್ದ ಕ್ರಿಕೆಟ್ ಬಾಟನ್ನು ಪಾಕಿಸ್ತಾನದ ಆಲ್‍ರೌಡರ್ ಶಾಹಿದ್ ಅಫ್ರಿದಿ ತಮ್ಮ ಸಂಸ್ಥೆಯ ಪರವಾಗಿ ಖರೀದಿಸಿದ್ದಾರೆ. ಈ ಮೂಲಕ ಉತ್ತಮ ಕಾರ್ಯಕ್ಕೆ ನೆರವಾದ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ” ಎಂದು ರಹೀಮ್ ಹೇಳಿದ್ದಾರೆ.
Advertisement
Thanks for your support brother ✊✊✊ pic.twitter.com/QeLiJBx0nY
— Mushfiqur Rahim (@mushfiqur15) May 15, 2020
“ಕೆಲ ಮೋಸಗಾರ ಬಿಡ್ಡರ್ ಗಳಿಂದ ಹರಾಜನ್ನು ರದ್ದುಗೊಳಿಸುವುದಕ್ಕೆ ಮುಂದಾಗಿದ್ದೆವು. ಆದರೆ ಅನಿರೀಕ್ಷಿತವಾಗಿ ಶಾಹಿದ್ ಭಾಯ್ ನನಗೆ ವೈಯಕ್ತಿಕವಾಗಿ ಕರೆ ಮಾಡಿ ಬ್ಯಾಟ್ ಖರೀದಿಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ಈ ವೇಳೆ ನೀವು ಮಾಡುತ್ತಿರುವುದು ನಿಜಕ್ಕೂ ದೊಡ್ಡ ಕಾರ್ಯ. ವಾಸ್ತವ ಬದುಕಿನಲ್ಲಿ ಹೀರೋಗಳು ಮಾತ್ರವೇ ಇದನ್ನು ಮಾಡಲು ಸಾಧ್ಯ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಮೇ 13ರಂದು 20,000 ಯುಎಸ್ ಡಾಲರ್‌ಗೆ ಬ್ಯಾಟ್ ಖರೀದಿಸುವ ಬಗ್ಗೆ ಪತ್ರ ಕಳುಹಿಸಿದ್ದರು” ಎಂದು ರಹೀಮ್ ತಿಳಿಸಿದ್ದಾರೆ.