15 ನಿಮಿಷದಲ್ಲಿ ಸೈಕಲಿನಲ್ಲಿ ಟೀ ತಂದುಕೊಟ್ಟ ಡೆಲಿವರಿ ಬಾಯ್‍ಗೆ ಐಟಿ ಉದ್ಯೋಗಿಯಿಂದ ಬೈಕ್ ಗಿಫ್ಟ್..!

Public TV
3 Min Read
BIKE

– ಒಂದೇ ದಿನದಲ್ಲಿ 73 ಸಾವಿರ ರೂ. ಸಂಗ್ರಹ
– ಸಹಾಯ ಮಾಡಿ ಮಾನವೀಯತೆ ಮೆರೆದ ಜನ

ಹೈದರಾಬಾದ್: ನಮ್ಮ ಸುತ್ತಮುತ್ತಲೂ ಒಳ್ಳೆಯವರೂ ಇದ್ದಾರೆ ಎಂಬುದನ್ನು ಹೈದರಾಬಾದ್ ನ ಐಟಿ ಉದ್ಯೋಗಿಯೊಬ್ಬರು ಸಾಬೀತು ಪಡಿಸಿದ್ದಾರೆ.

ಹೌದು. ಮಳೆಯಲ್ಲಿ ನೆನೆದುಕೊಂಡೇ 15 ನಿಮಿಷದಲ್ಲಿ ಟೀ ತಂದು ಕೊಟ್ಟ ಝೋಮ್ಯಾಟೋ ಡೆಲಿವರಿ ಬಾಯ್ ಗೆ ಬೈಕ್ ಗಿಫ್ಟ್ ಮಾಡಿದ್ದಾರೆ. ತನಗೆ ಬೈಕ್ ಸಿಗುತ್ತಿದ್ದಂತೆಯೇ ಡೆಲಿವರಿ ಬಾಯ್ ಖುಷಿಗೆ ಪಾರವೇ ಇಲ್ಲದಂತಾಗಿದೆ. ಡೆಲಿವರಿ ಬಾಯ್ ನನ್ನು ಮೊಹಮ್ಮದ್ ಅಖೀಲ್ ಎಂದು ಗುರುತಿಸಲಾಗಿದ್ದು, ಈತನಿಗೆ ರಾಬಿನ್ ಮುಕೇಶ್ ಎಂಬವರು ಬೈಕ್ ನೀಡಿದ್ದಾರೆ.

TEA

ರಾಬಿನ್ ಮುಕೇಶ್ ಹೈದರಾಬಾದ್ ನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಇವರು ಒಂದು ದಿನ ಫುಡ್ ಡೆಲಿವರಿ ಆ್ಯಪ್ ಮೂಲಕ ಟೀ ಆರ್ಡರ್ ಮಾಡಿದ್ದರು. ಈ ವೇಳೆ ಟೀ ತಂದು ಕೊಟ್ಟ ಯುವಕನ ಕಂಡು ಮುಕೇಶ್ ಮನಸ್ಸು ಕರಗಿದ್ದು, ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡಿದ ಮುಕೇಶ್, ರಾತ್ರಿ 10 ಗಂಟೆ ಸುಮಾರಿಗೆ ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಈ ವೇಳೆ ನನಗೆ ಟೀ ಕುಡಿಯಬೇಕು ಅನಿಸಿತ್ತು. ಹೀಗಾಗಿ ನಾನು ಹೈದರಾಬಾದ್ ನಲ್ಲಿರುವ ಲಕ್ಡಿ-ಕಾ-ಪೂಲ್ ಎಂಬ ಹೋಟೇಲಿನಿಂದ ಟೀ ಆರ್ಡರ್ ಆಡಿದೆ. ಅಂತೆಯೇ ಕೆಲ ಸಮಯದ ಬಳಿಕ ಡೆಲಿವರಿ ಬಾಯ್ ಎಲ್ಲಿದ್ದಾನೆ ಎಂಬುದನ್ನು ಟ್ರ್ಯಾಕ್ ಮಾಡಿದೆ. ಆಗ ನನ್ನ ಆರ್ಡರ್ ಅನ್ನು ಮೊಹಮ್ಮದ್ ಅಕೀಲ್ ಎಂಬಾತ ತರುತ್ತಿದ್ದಾನೆ ಎಂಬುದು ಗೊತ್ತಾಯಿತು. ಅಲ್ಲದೆ ಆತ ಮೆಹದಿಪಟ್ನಂನಲ್ಲಿರುವುದನ್ನು ಗಮನಿಸಿದೆ. ನಾನು ಆರ್ಡರ್ ಮಾಡಿದ 15 ನಿಮಿಷಕ್ಕೆ ಪಾರ್ಸೆಲ್ ನಾನು ಇರುವ ಅಪಾರ್ಟ್ ಮೆಂಟ್ ಗೆ ಬಂದಿದೆ ಎಂದರು.

BIKE 1 medium

ಮತ್ತೆ ಮಾತು ಮುಂದುವರಿಸಿದ ಅವರು, ಅಪಾರ್ಟ್ ಮೆಂಟ್ ಬಳಿ ಬಂದವನೇ ಕೆಳಗೆ ಬಂದು ಪಾರ್ಸೆಲ್ ತೆಗೆದುಕೊಂಡು ಹೋಗುವಂತೆ ನನಗೆ ಕರೆ ಮಾಡಿದ್ದಾನೆ. ಕೂಡಲೇ ನಾನು ಕೆಳಗಡೆ ಹೋದೆ. ವಿಪರೀತ ಮಳೆಯಿಂದಾಗಿ ಸಂಪೂರ್ಣವಾಗಿ ತೇವಗೊಂಡಿದ್ದ ಯುವಕನನ್ನು ನಾನು ನೋಡಿದೆ. ಜಡಿ ಮಳೆಯಲ್ಲಿ ಒದ್ದೆಯಾಗಿಕೊಂಡೇ ಕೇವಲ 15 ನಿಮಿಷಗಳಲ್ಲಿ ಬೈಸಿಕಲ್‍ನಲ್ಲಿ ಬಂದು ಹೇಗೆ ಇಷ್ಟು ಬೇಗ ತಲುಪಿದೆ ಎಂದು ಪ್ರಶ್ನಿಸಿದೆ. ಆಗ ಅವನು, ಕಳೆದ ಒಂದು ವರ್ಷದಿಂದ ಬೈಸಿಕಲ್ ಮೂಲಕ ಫುಡ್ ಡೆಲಿವರಿ ಮಾಡುತ್ತಿರುವುದಾಗಿ ತಿಳಿಸಿದ. ಈ ಮಾತುಗಳನ್ನು ಕೇಳಿ ನನಗೆ ನಿಜಕ್ಕೂ ಬೇಸರವಾಯಿತು ಎಂದರು.

ಹೀಗೆ ಮಾತನಾಡುತ್ತಾ ಮುಕೇಶ್, ಹುಡುಗನ ಬಳಿ ಅನುಮತಿ ಪಡೆದು ಫೋಟೋ ತೆಗೆದುಕೊಂಡಿದ್ದಾರೆ. ಅಲ್ಲದೆ ಆತ ಒಬ್ಬ ಬಿಟೆಕ್ ಪದವೀಧರ ಎಂಬುದು ಗೊತ್ತಾಯಿರು. ಕೂಡಲೇ ಅಕೀಲ್ ಫೋಟೋವನ್ನು ಮುಕೇಶ್ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಇಡೀ ಕಥೆಯನ್ನು ವಿವರಿಸಿದೆ. ಇದನ್ನು ಓದಿದ ಹಲವಾರು ಮಂದಿ ಸಾಕಷ್ಟು ಕಾಮೆಂಟ್ ಮಾಡಿದ್ದುಟ್ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅಕೀಲ್ ಗೆ ಸಹಾಯ ಮಾಡುವುದಾಗಿ ತಿಳಿಸಿದರು.

zomato

ಈ ಹಿನ್ನೆಲೆಯಲ್ಲಿ ಅಕೀಲ್ ನನ್ನು ಕೇಳಿದಾಗ ಆತ ತನಗೆ ಬೈಕ್ ಸಿಕ್ಕರೆ ತುಂಬಾ ಸಹಾಯ ಆಗುತ್ತೆ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅದೇ ದಿನ ಹಣ ಸಂಗ್ರಹಿಸಲು ಆರಂಭಿಸಿದ್ದು, ಮರು ದಿನವೇ ಅಕೀಲ್ ಗೆ ಬೈಕ್ ಉಡುಗೊರೆಯಾಗಿ ನೀಡಲಾಗಿದೆ. ಇಷ್ಟೆಲ್ಲಾ ಆಗಿದ್ದು ಕೇವಲ 12 ಗಂಟೆಯಲ್ಲಿ. ಅನೇಕ ಮಂದಿ ಅಕೀಲ್ ಗಾಗಿ ಸಹಾಯ ಮಾಡಿದ್ದು, ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯೊಬ್ಬರು 30 ಸಾವಿರ ಹಣ ನೀಡಿರುವುದಾಗಿ ಮುಕೇಶ್ ವಿವರಿಸಿದ್ದಾರೆ.

ಒಟ್ಟಿನಲ್ಲಿ ಕೇವಲ 12 ಗಂಟೆಯಲ್ಲಿ 73 ಸಾವಿರ ರೂ. ಕ್ರೂಢೀಕರಿಸಿ ಅಕೀಲ್ ಗೆ ಸಹಾಯ ಮಾಡಿದ್ದು ಸದ್ಯ ಹಣ ಸಂಗ್ರಹವನ್ನು ನಿಲ್ಲಿಸಲಾಗಿದೆ ಎಂದು ಮುಕೇಶ್ ತಿಳಿಸಿ, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *