ಬೆಂಗಳೂರು: ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸುತ್ತಿದ್ದಾರೆ. ಹೀಗಾಗಿ ನಾನು ಕಾಂಗ್ರೆಸ್‌ಗೆ ಬರುತ್ತೇನೆ ಎಂದು 15 ದಿನದ ಹಿಂದೆ ಯೋಗೇಶ್ವರ್ ನನ್ನ ಬಳಿ ಮನವಿ ಮಾಡಿಕೊಂಡಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ತನ್ನ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಈಗ ಈ ರೀತಿಯ ಹೇಳಿಕೆ ನೀಡಿ ತಿರುಗೇಟು ನೀಡಿದ್ದಾರೆ.
Advertisement
Advertisement
ನನ್ನ ಬಳಿ ಬಂದು ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇನೆ ಎಂದು ಚರ್ಚೆ ಮಾಡಿದ್ದ. ಈ ವೇಳೆ ನಾನೇ ಇಲ್ಲಿಗೆ ಬರುವುದು ಬೇಡ. ಅಲ್ಲೇ ಲಾಯಲ್ ಆಗಿ ಇರು ಎಂದು ಹೇಳಿ ಕಳುಹಿಸಿಕೊಟ್ಟಿದ್ದೆ. ಈಗ ಯಾಕೆ ಹೀಗೆ ಮಾತಾಡಿದ್ದರೋ ಗೊತ್ತಿಲ್ಲ. ಮೆಂಟಲ್ ಆಗಿದ್ದಾರಾ ಎಂದು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಬರುವಂತೆ ಎಚ್‍ಡಿಕೆಗೆ ನೇರ ಆಹ್ವಾನ ನೀಡಿದ ಸಿಪಿ ಯೋಗೇಶ್ವರ್
Advertisement
ಯೋಗೇಶ್ವರ್ ಹೇಳಿದ್ದು ಏನು?
ಜಿಲ್ಲೆಯಲ್ಲಿ ಡಿಕೆಶಿ ಸಹೋದರರು ಆಪರೇಷನ್ ಆರಂಭ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಅವರ ಪಕ್ಷದಲ್ಲಿ ಭವಿಷ್ಯ ಇಲ್ಲ. ಆದ್ದರಿಂದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಬರಲಿ. ಡಿಕೆ ಶಿವಕುಮಾರ್ ಅವರು ಚುನಾವಣೆಯಲ್ಲಿ ಗೆಲುವು ಪಡೆಯಲು ಕುಮಾರಸ್ವಾಮಿ ಸಹಾಯ ತೆಗೆದುಕೊಂಡಿದ್ದರು. ಆದರೆ ಈಗ ಅವರ ನಡುವೆ ಒಗ್ಗಟ್ಟಿಲ್ಲ. ಇಬ್ಬರ ನಡುವೆ ಅಂತರ್ ಯುದ್ಧ ಪ್ರಾರಂಭವಾಗಿದೆ ಎಂದು ಆರೋಪ ಮಾಡಿದ್ದರು.