– 150 ದಿನಗಳ ನಂತ್ರ ಅತಿ ಹೆಚ್ಚು ಪ್ರಕರಣಗಳು
ಮುಂಬೈ: ನೆರೆಯ ಮಹಾರಾಷ್ಟ್ರದಲ್ಲಿ ಒಂದೇ ದಿನ 13,659 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 15 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗಿದ್ದು, ಮಹಾರಾಷ್ಟ್ರದ ಜನತೆ ಆತಂಕದಲ್ಲಿದ್ದಾರೆ.
Advertisement
2020 ಅಕ್ಟೋಬರ್ 7ರಂದು ಮಹಾರಾಷ್ಟ್ರದಲ್ಲಿ 14,578 ಕೊರೊನಾ ಪ್ರಕರಣಗಳು ಕಂಡು ಬಂದಿದ್ದವು. ಸದ್ಯ ಕಳೆದ 24 ಗಂಟೆಯಲ್ಲಿ 13 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ದೇಶದ ಶೇ.60ರಷ್ಟು ಪ್ರಕರಣಗಳು ವರದಿಯಾಗುತ್ತಿವೆ.
Advertisement
India reports 22,854 new COVID-19 cases, 18,100 recoveries, and 126 deaths in the last 24 hours
Total cases: 1,12,85,561
Total recoveries: 1,09,38,146
Active cases: 1,89,226
Death toll: 1,58,189 pic.twitter.com/tNU06VMT8p
— ANI (@ANI) March 11, 2021
Advertisement
ದೇಶದಲ್ಲಿ ಬುಧವಾರ 22,854 ಜನರಿಗೆ ಸೋಂಕು ತಗುಲಿದ್ದು, 18,100 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 126 ಜನರನ್ನ ಕೊರೊನಾ ಬಲಿ ಪಡೆದುಕೊಂಡಿದ್ದು, ಇದುವರೆಗೂ 1,58,189 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ 189,226 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.