ನವದೆಹಲಿ: ಮಾಸ್ಕ್ ಧರಿಸಲು ನಿರ್ಲಕ್ಷ್ಯವಹಿಸೋರೆಲ್ಲಾ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಎಲ್ಲವನ್ನು ಧರಿಸಿ ಜನರ ಪ್ರಾಣ ಉಳಿಸಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ್‍ರನ್ನು ನೆನಪಿಸುವ ಒಂದು ಘಟನೆ ನಡೆದಿದೆ.
Talking on the behalf of all doctors and health workers.. we are really working hard away from our family.. sometimes a foot away from positive patient, sometimes an inch away from critically ill oldies… I request please go for vaccination.. it’s only solution ! Stay safe. ????????
— Dr_sohil (@DrSohil) April 28, 2021
Advertisement
14-15 ಗಂಟೆಗಳ ಕಾಲ ಸತತ ಪಿಪಿಇ ಕಿಟ್ ಧರಿಸಿದ್ದರಿಂದ ಮೈಯೆಲ್ಲಾ ಬೇವರಿನಿಂದ ತೇವವಾಗಿರುವ ಘೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈದ್ಯರು ಹೇಗೆ ಪ್ರತಿದಿನ ರಿಸ್ಕ್ನಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ವೈದ್ಯ ಸೋಹಿಲ್ ಪಿಪಿಇ ಕಿಟ್ ಧರಿಸಿದಾಗ ಮತ್ತು ತೆಗೆದಾಗಿನ 2 ಫೋಟೋಗಳನ್ನು ಹಾಕಿದ್ದರು.
Advertisement
Proud to serve the nation pic.twitter.com/xwyGSax39y
— Dr_sohil (@DrSohil) April 28, 2021
Advertisement
ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಪರವಾಗಿ ನಾನು ಹೇಳುತ್ತಿದ್ದೇನೆ. ನಾವು ನಮ್ಮ ಕುಟುಂಬಗಳಿಂದ ದೂರವಿದ್ದು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಕೆಲವೊಮ್ಮೆ ಕೊರೊನಾ ರೋಗಿಗಳಿಂದ ಒಂದು ಅಡಿ ಅಂತರದಲ್ಲೇ ಇದ್ದರೆ ಇನ್ನೂ ಕೆಲವೊಮ್ಮೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಂದ ಒಂದಿಂಚು ದೂರ ನಿಂರತುಕೊಂಡೇ ಕಾರ್ಯನಿರ್ವಹಿಸುತ್ತೇವೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ. ಸುರಕ್ಷಿತವಾಗಿರಿ ಎಂದು ವೈದ್ಯ ಸೋಹಿಲ್ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.