– ಕ್ಷಮೆಗೆ ಬಿಜೆಪಿ ಆಗ್ರಹ
– ಸಜ್ಜನ್ ಸಿಂಗ್ ವರ್ಮಾ ಸ್ಪಷ್ಟನೆ
ಭೋಪಾಲ್: ಹೆಣ್ಣು ಮಕ್ಕಳಿಗೆ 15 ವರ್ಷಕ್ಕೆ ಹೆರುವ ಸಾಮರ್ಥ್ಯ ಇರುವಾಗ ಮದುವೆಯ ವಯಸ್ಸನ್ನು 21ಕ್ಕೆ ಏರಿಕೆ ಮಾಡುವುದು ಯಾಕೆ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Advertisement
ಅಪ್ರಾಪ್ತೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಅವರ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18ರಿಂದ 21ನೇ ವಯಸ್ಸಿಗೆ ಏರಿಸುವ ಚಿಂತನೆ ನಡೆಸಿದೆ. ಈ ಬೆನ್ನಲ್ಲೇ ಮಧ್ಯಪ್ರದೇಶದ ಸಜ್ಜನ್ ಸಿಂಗ್ ಹೇಳಿಕೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಈ ಕೂಡಲೇ ವರ್ಮಾ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹಿಸಿದೆ.
Advertisement
#WATCH | According to doctors, a girl is ready for reproduction by the age of 15. Is the CM a doctor or a scientist? So, on what basis does girls' marriage age should be increased to 21 from 18: Congress leader Sajjan Singh Verma in Bhopal pic.twitter.com/sVF1UyeLra
— ANI (@ANI) January 13, 2021
Advertisement
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹ್ಹಾಣ್ ಅವರು ಯುವತಿಯರ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಏರಿಸಬೇಕು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವರ್ಮಾ, ಅವರು ಹೀಗೆ ಹೇಳಲು ವಿಜ್ಞಾನಿಯೇ ಅಥವಾ ದೊಡ್ಡ ವೈದ್ಯರೇ..?, ಬಾಲಕಿಯರು ತಮ್ಮ 15ರ ಹರೆಯದಲ್ಲಿಯೇ ಸಂತಾನೋತ್ಪತ್ತಿ ಮಾಡಲು ಸಾಮರ್ಥ್ಯ ಹೊಂದಿರುತ್ತಾರೆ. ಹೀಗಾಇರುವಾಗ ಅವರ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಯಾಕೆ ಏರಿಕೆ ಮಾಡಬೇಕು ಎಂದು ಮಾಧ್ಯಮದವರ ಮುಂದೆ ಮರು ಪ್ರಶ್ನೆ ಹಾಕಿದ್ದಾರೆ. ಈ ಮೂಲಕ ವರ್ಮಾ ಅವರು ಮಹಿಳೆಯರು ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಪ್ರಾಪ್ತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಗಂಭೀರವಾದ ಆರೋಪ ಕೂಡ ಮಾಡಿದ್ದಾರೆ.
Advertisement
ಇನ್ನು ತಮ್ಮ ಹೇಳಿಕೆಯ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ವರ್ಮಾ ಸಮಜಾಯಿಷಿ ನೀಡಿದ್ದಾರೆ. ವೈದ್ಯರ ವರದಿಗಳ ಪ್ರಕಾರ, 15 ವರ್ಷದಲ್ಲಿಯೇ ಹೆಣ್ಣಿಗೆ ಪ್ರಬುದ್ಧತೆ ಬಂದಿರುತ್ತದೆ. ಹೀಗಾಗಿ ಅವರು 15 ರ ಹರೆಯದಲ್ಲಿಯೇ ಮಕ್ಕಳಿಗೆ ಜನ್ಮ ನೀಡಬಹುದಾಗಿದೆ. ಆದ್ದರಿಂದ 18 ವರ್ಷಕ್ಕೆ ಅತ್ತೆ ಮನೆಗೆ ಹೋಗಿ ಖುಷಿಯಾಗಿರಬಹುದು ಅಂತ ತಾನು ಹೆಳಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
National Commission For Protection of Child Rights issues notice to Congress leader Sajjan Singh Verma, requesting him to "provide an explanation within 2 days giving reasons and justifying his intention for making such discriminatory statement against minor girls and law…" https://t.co/llPjYyQa40
— ANI (@ANI) January 14, 2021