Connect with us

Corona

15 ಮಂದಿ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕೊರೊನಾ- ತರಬೇತಿ ಕೇಂದ್ರ ಸೀಲ್‍ಡೌನ್

Published

on

ರಾಯಚೂರು: 15 ಜನ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಧೃಡವಾಗಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರವನ್ನ ಸೀಲ್ ಡೌನ್ ಮಾಡಲಾಗಿದೆ.

ಎಸ್ ಪಿ ಕಚೇರಿ ಆವರಣದಲ್ಲಿರುವ ತರಬೇತಿ ಕೇಂದ್ರದಲ್ಲಿ 40 ದಿನಗಳಿಂದ ನಡೆಯುತ್ತಿದ್ದ ಪೊಲೀಸ್ ತರಬೇತಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಎಸ್ ಐಎಸ್‍ಎಫ್ ತರಬೇತಿ ಪಡೆಯುತ್ತಿದ್ದ 100 ಮಂದಿ ಪ್ರಶಿಕ್ಷಣಾರ್ಥಿಗಳಲ್ಲಿ 15 ಮಂದಿಗೆ ಕೊರೊನಾ ದೃಢವಾಗಿದೆ.

ಮೂರು ದಿನಗಳ ಹಿಂದೆ ಕೆಲವರಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಶುಕ್ರವಾರ 8 ಜನ ಇಂದು 7 ಜನರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಸೋಂಕಿತರನ್ನ ಕೊವಿಡ್ ಕೇರ್ ಸೆಂಟರ್‍ಗೆ ದಾಖಲಿಸಲಾಗಿದೆ. 36 ಜನ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರನ್ನ ಕ್ವಾರಂಟೈನ್ ಮಾಡಲಾಗಿದೆ.

ರೋಗಲಕ್ಷಣಗಳ ಇಲ್ಲದವರನ್ನ ಮಾತ್ರ ಕೆಲ ಹೊತ್ತು ಮೈದಾನಕ್ಕೆ ಬಿಡಲಾಗುತ್ತಿದೆ. ಕ್ವಾರಂಟೈನ್ ನಲ್ಲಿರುವವರಿಗೆ ನಿತ್ಯ ಕಷಾಯ, ಉತ್ತಮ ಊಟ ನೀಡುತ್ತಿದ್ದು, ತರಬೇತಿ ಕೇಂದ್ರವನ್ನ ಸಂಪೂರ್ಣ ಸ್ಯಾನಿಟೈಸ್ ಮಾಡಿ ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *