15ನೇ ಆವೃತ್ತಿಯ ಐಪಿಎಲ್ – 10 ತಂಡಗಳು ಆಡುವುದು ಫಿಕ್ಸ್

Public TV
1 Min Read
ipl trophy

ಮುಂಬೈ: ಮುಂದಿನ ವರ್ಷ 2022ರಲ್ಲಿ ನಡೆಯಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 10 ತಂಡಗಳು ಭಾಗವಹಿಸಲಿದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿದೆ.

IPL 6

ಈಗಾಗಲೇ ಕೊರೊನಾ ಮಹಾಮಾರಿಯ ಮಧ್ಯೆ 14ನೇ ಐಪಿಎಲ್ ಆರಂಭಕ್ಕೆ ಸಕಲ ಸಿದ್ಧತೆಯಲ್ಲಿ ಬಿಸಿಸಿಐ ತೊಡಗಿದೆ. ಈ ಸಿದ್ಧತೆಯೊಂದಿಗೆ ಮುಂದಿನ ವರ್ಷ ನಡೆಯಲಿರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳನ್ನು ಆಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

bcci 1

ಈ ಹಿಂದೆ ಹಲವು ಬಾರಿ 10 ತಂಡಗಳು ಐಪಿಎಲ್‍ನಲ್ಲಿ ಆಡುವ ಕುರಿತು ವರದಿಯಾಗಿತ್ತು. ಆದರೆ ಇದೀಗ ಈ ವರದಿ ನಿಜವಾಗಿದೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್‍ನಲ್ಲಿ 10 ತಂಡ ಭಾಗವಹಿಸಲಿದ್ದು, ಮೇ ತಿಂಗಳಲ್ಲಿ 2 ತಂಡಗಳು ಯಾವು? ಮಾಲೀಕರು ಯಾರು ಎನ್ನುವುದು ಬಿಡ್ಡಿಂಗ್ ಮೂಲಕ ತಿಳಿಯಲಿದೆ.

BCCI 1

ಈ ಕುರಿತು ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಬಿಸಿಸಿಐ ಮತ್ತು ಇತರ ಸದಸ್ಯರ ನಡುವೆ ಸಭೆ ನಡೆದಿದೆ. ಸಭೆಯಲ್ಲಿ 10 ತಂಡಗಳನ್ನು ಆಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಇದೆ.

14ನೇ ಆವೃತ್ತಿಯ ಐಪಿಎಲ್ ಏಪ್ರಿಲ್ 9 ರಿಂದ ಆರಂಭಗೊಳ್ಳಲಿದ್ದು, ಒಟ್ಟು 8 ತಂಡಗಳ ನಡುವೆ 6 ನಗರಗಳಲ್ಲಿ ನಡೆಯಲಿದೆ. ಈಗಾಗಲೇ ಕೆಲವು ತಂಡ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ipl 5

ಈ ಮೊದಲು 2011ರಲ್ಲಿ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಭಾಗಿವಹಿಸಿದ್ದವು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ಮತ್ತು ಪುಣೆ ವಾರಿಯರ್ಸ್ ತಂಡಗಳು ಹೊಸ ಸೇರ್ಪಡೆಯಾಗಿ 10 ತಂಡಗಳಾಗಿದ್ದವು. ಇದೀಗ ಮತ್ತೆ 2022ರ ಐಪಿಎಲ್‍ನಲ್ಲಿ 10 ತಂಡಗಳು ಭಾಗವಹಿಸುವುದು ಖಚಿತವಾಗಿದೆ. ಈ ಮೂಲಕ ಕಲರ್ ಫುಲ್ ಟೂರ್ನಿ ಮತ್ತಷ್ಟೂ ರೋಚಕ ಪಂದ್ಯಾಟಗಳಿಂದ ಅಭಿಮಾನಿಗಳನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *