ಮುಂಬೈ: ಕೊರೊನಾ ಕಾಟದಿಂದ ಮುಂದೂಡಲ್ಪಟ್ಟ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ದುಬೈನಲ್ಲಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Advertisement
ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್ನ ಉಳಿದ ಪಂದ್ಯಗಳು ದುಬೈನಲ್ಲಿ ಸೆಪ್ಟೆಂಬರ್ ಮೂರನೇ ವಾರ 18 ಅಥವಾ 19ರಂದು ಆರಂಭವಾಗಲಿದ್ದು, ಅಕ್ಟೋಬರ್ 9 ಅಥವಾ 10ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಐಪಿಎಲ್ನಲ್ಲಿ ಆಡುತ್ತಿದ್ದ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಕಾರಣ ಐಪಿಎಲ್ನ್ನು ಮೇ 4ರಂದು ಬಿಸಿಸಿಐ ಮುಂದೂಡಿತ್ತು. ಇದೀಗ ಮತ್ತೆ ಪಂದ್ಯಗಳನ್ನು ನಡೆಸಲು ತೀರ್ಮಾಣಿಸಿದೆ.
Advertisement
Advertisement
ಸೆಪ್ಟೆಂಬರ್ 18 ಶನಿವಾರ ಮತ್ತು 20 ಭಾನುವಾರವಾಗಿರುವುದರಿಂದ ಪಂದ್ಯಗಳನ್ನು ಆರಂಭಿಸಲು ಇದು ಉತ್ತಮ ದಿನವಾಗಿದೆ. ಇದರಂತೆ ಅಕ್ಟೋಬರ್ 9 ಮತ್ತು 10 ಕೂಡ ವಾರದ ಕೊನೆಯ ದಿನಗಳಾಗಿರುವುದರಿಂದ ಫೈನಲ್ ಕೂಡ ನಡೆಸಲು ಸರಿಯಾದ ದಿನವಾಗಿದೆ. ಹಾಗಾಗಿ ಉಳಿದ 31 ಪಂದ್ಯಗಳನ್ನು 10 ಡಬಲ್ ಹೆಡರ್, 7 ಸಿಂಗಲ್ ಹೆಡರ್ ಮತ್ತು 4 ಮುಖ್ಯ ಪಂದ್ಯಗಳನ್ನು ನಡೆಸಲು ತಯಾರಿ ಆರಂಭವಾಗಿದೆ ಎಂದು ತಿಳಿದು ಬಂದಿದೆ.
Advertisement
ಈ ಕುರಿತು ಬಿಸಿಸಿಐ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಮೇ 29 ರಂದು ನಡೆಯಲಿರುವ ಬಿಸಿಸಿಐನ ಸಾಮಾನ್ಯ ಸಭೆಯ ಬಳಿಕ ನಿರ್ಧಾರ ಹೊರಬೀಳುವ ಸಾಧ್ಯತೆಗಳು ಹೆಚ್ಚಿದೆ ಎಂದು ವರದಿಯಾಗಿದೆ.
ಈಗಾಗಲೇ ನಿಗದಿಯಾಗಿರುವ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಚಾಂಪಿಯನ್ಶಿಪ್ ಜೂನ್ 18 ರಿಂದ 22ರ ವರೆಗೆ ನಡೆಯಲಿದೆ. ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಳಿದೆ. ಅದಾದ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಐಪಿಎಲ್ಗಾಗಿ ಟೀಂ ಇಂಡಿಯಾ ಆಟಗಾರರು ದುಬೈಗೆ ತೆರಳುವ ಸಾಧ್ಯತೆ ಇದೆ. ಐಪಿಎಲ್ಗಾಗಿ ಸೆಪ್ಟೆಂಬರ್ನಲ್ಲಿ ನಡೆಯಬೇಕಾಗಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯನ್ನು ಬಿಸಿಸಿಐ ರದ್ದುಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ ದುಬೈನಲ್ಲಿ ನಡೆಯುವ ಐಪಿಎಲ್ನ ಉಳಿದ ಪಂದ್ಯಗಳಿಗೆ ವಿದೇಶಿ ಆಟಗಾರರು ಆಗಮಿಸುತ್ತಾರಾ ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ.
13ನೇ ಆವೃತ್ತಿಯ ಐಪಿಎಲ್ನ್ನು ಬಿಸಿಸಿಐ ದುಬೈನಲ್ಲಿ ಯಶಸ್ವಿಯಾಗಿ ಕಳೆದ ವರ್ಷ ಆಯೋಜಿಸಿತ್ತು. ಹಾಗಾಗಿ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಅಲ್ಲಿ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತಿದೆ.