ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ಇಂದು 14,950 ಪಾಸಿಟಿವ್ ಕೇಸ್ ದಾಖಲಾಗಿದೆ. ಕಲಬುರಗಿಯ 9 ವರ್ಷದ ಬಾಲಕ ಸಹಿತ ಒಟ್ಟು 53 ಮರಣ ಪ್ರಕರಣ ವರದಿಯಾಗಿದೆ.
Advertisement
ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 10.93%ಕ್ಕೆ ಇಳಿಕೆ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,23,098 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 6,039 ಹೊಸ ಕೇಸ್ ಪತ್ತೆಯಾಗಿದ್ದು, ಇಂದು 15 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: RD Parade 2022: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ
Advertisement
Advertisement
ರಾಜ್ಯದಲ್ಲಿ ಒಟ್ಟು 40,599 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 38,75,724 ಮಂದಿಗೆ ಕೊರೊನಾ ಬಂದಿದೆ. ಒಟ್ಟು 37,13,343 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.35% ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 2,29,263 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,36,777 ಸ್ಯಾಂಪಲ್ (ಆರ್ಟಿಪಿಸಿಆರ್ 1,04,273 + 32,504 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್ ಹೌಸ್ ಫುಲ್- ಸರ್ಕಾರದಿಂದ ಅನುಮತಿ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ನಿನ್ನೆಗಿಂತ ಇಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡುಬಂದಿದೆ. ಬಾಗಲಕೋಟೆ 175, ಬಳ್ಳಾರಿ 425, ಬೆಳಗಾವಿ 1,018, ಬೆಂಗಳೂರು ಗ್ರಾಮಾಂತರ 147, ಬೆಂಗಳೂರು ನಗರ 6,039, ಬೀದರ್ 106, ಚಾಮರಾಜನಗರ 201, ಚಿಕ್ಕಬಳ್ಳಾಪುರ 178, ಚಿಕ್ಕಮಗಳೂರು 73, ಚಿತ್ರದುರ್ಗ 177, ದಕ್ಷಿಣ ಕನ್ನಡ 319, ದಾವಣಗೆರೆ 122, ಧಾರವಾಡ 393, ಗದಗ 81, ಹಾಸನ 560, ಹಾವೇರಿ 321, ಕಲಬುರಗಿ 289, ಕೊಡಗು 316, ಕೋಲಾರ 197, ಕೊಪ್ಪಳ 173, ಮಂಡ್ಯ 488, ಮೈಸೂರು 944, ರಾಯಚೂರು 183, ರಾಮನಗರ 65, ಶಿವಮೊಗ್ಗ 543, ತುಮಕೂರು 656, ಉಡುಪಿ 201, ಉತ್ತರ ಕನ್ನಡ 313, ವಿಜಯಪುರ 191 ಮತ್ತು ಯಾದಗಿರಿಯಲ್ಲಿ 56 ಪಾಸಿಟಿವ್ ಪ್ರಕರಣ ದಾಖಲಾಗಿದೆ.