ಬೆಂಗಳೂರು: ಇಂದು 1,445 ಮಂದಿಗೆ ಕೊರೊನಾ ಬಂದಿದ್ದು, 661 ಮಂದಿ ಬಿಡುಗಡೆಯಾಗಿದ್ದಾರೆ. 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಇಂದು 99,361 ಡೋಸ್ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 25,81,918 ಲಸಿಕೆಯನ್ನು ವಿತರಿಸಲಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,71,647ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 9,44,917 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 14,267 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 13,444 ಮಂದಿ ಮೃತಪಟ್ಟಿದ್ದಾರೆ. ಐಸಿಯುನಲ್ಲಿ 136 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಒಟ್ಟು 78,178 ಕೊರೊನಾ ಟೆಸ್ಟ್ ಮಾಡಿದ್ದು ಇಲ್ಲಿಯವರೆಗೆ ಒಟ್ಟು ರಾಜ್ಯದಲ್ಲಿ 2,04,67,387 ಟೆಸ್ಟ್ ಮಾಡಲಾಗಿದೆ.
ಬೆಂಗಳೂರಿನಲ್ಲಿ 886, ಉಡುಪಿ 113, ಮೈಸೂರು 61, ತುಮಕೂರು 51, ಬೀದರ್ 51, ಕಲಬುರಗಿ 43 ಮಂದಿಗೆ ಸೋಂಕು ಬಂದಿದೆ.
ಬೆಂಗಳೂರಿನಲ್ಲಿ 45, ಕಲಬುರಗಿಯಲ್ಲಿ 17, ಮಂಡ್ಯ 10, ಮೈಸೂರಿನಲ್ಲಿ 5 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 136 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.