ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗುತ್ತಿದೆ. ಇಂದು ಒಟ್ಟು 14,366 ಹೊಸ ಕೇಸ್ ದಾಖಲಾಗಿದ್ದು, 58 ಮರಣ ಪ್ರಕರಣ ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ವಿಜಯಪುರದಲ್ಲಿ 7 ವರ್ಷದ ಬಾಲಕ ಬಲಿಯಾಗಿದ್ದಾನೆ.
Advertisement
ಪಾಸಿಟಿವಿಟಿ ರೇಟ್ 13.45%ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 6,685 ಹೊಸ ಕೇಸ್ ಪತ್ತೆಯಾಗಿದ್ದು, 9 ಮರಣ ಪ್ರಕರಣ ವರದಿಯಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 60,914 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 38,23,833 ಮಂದಿಗೆ ಕೊರೊನಾ ಬಂದಿದೆ. ಒಟ್ಟು 35,87,022 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.40 ರಷ್ಟಿದೆ. ಇದನ್ನೂ ಓದಿ: Budget: 2 ಲಕ್ಷ ಅಂಗನವಾಡಿಗಳನ್ನು ‘ಸಕ್ಷಮ್ ಅಂಗನವಾಡಿ’ಗಳಾಗಿ ಮಾರ್ಪಾಡು – ಮಹಿಳಾ ಸಬಲೀಕರಣಕ್ಕೆ ಒತ್ತು
Advertisement
Advertisement
ರಾಜ್ಯದಲ್ಲಿ ಇಂದು ಒಟ್ಟು 1,83,265 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,06,799 ಸ್ಯಾಂಪಲ್ (ಆರ್ಟಿಪಿಸಿಆರ್ 70,065 + 36,734 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಪ್ರತಿ ಜಿಲ್ಲೆಗಳಲ್ಲೂ ಕೂಡ ಕೊರೊನಾ ಪಾಸಿಟಿವ್ ಪ್ರಕರಣಗಳು ಇಳಿಕೆ ಕಾಣುತ್ತಿದೆ. ಇಂದು ಬಾಗಲಕೋಟೆ 165, ಬಳ್ಳಾರಿ 437, ಬೆಳಗಾವಿ 1,081, ಬೆಂಗಳೂರು ಗ್ರಾಮಾಂತರ 117, ಬೆಂಗಳೂರು ನಗರ 6,685, ಬೀದರ್ 115, ಚಾಮರಾಜನಗರ 87, ಚಿಕ್ಕಬಳ್ಳಾಪುರ 126, ಚಿಕ್ಕಮಗಳೂರು 154, ಚಿತ್ರದುರ್ಗ 252, ದಕ್ಷಿಣ ಕನ್ನಡ 322, ದಾವಣಗೆರೆ 126, ಧಾರವಾಡ 633, ಗದಗ 73, ಹಾಸನ 337, ಹಾವೇರಿ 130, ಕಲಬುರಗಿ 135, ಕೊಡಗು 205, ಕೋಲಾರ 169, ಕೊಪ್ಪಳ 99, ಮಂಡ್ಯ 211, ಮೈಸೂರು 777, ರಾಯಚೂರು 38, ರಾಮನಗರ 58, ಶಿವಮೊಗ್ಗ 325, ತುಮಕೂರು 573, ಉಡುಪಿ 230, ಉತ್ತರ ಕನ್ನಡ 551, ವಿಜಯಪುರ 81 ಮತ್ತು ಯಾದಗಿರಿಯಲ್ಲಿ 74 ಪಾಸಿಟಿವ್ ಪ್ರಕರಣ ದಾಖಲಾಗಿದೆ.