ನವದೆಹಲಿ: ಡಿ. 13ರಂದು ಸಂಸತ್ ಭವನದಲ್ಲಿ ಸಂಭವಿಸಿದ್ದ ಭದ್ರತಾ ಲೋಪ (Parliament Security Breach) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಉತ್ತರಕ್ಕೆ ಒತ್ತಾಯಿಸಿ, ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ವಿಪಕ್ಷಗಳ 49 ಸದಸ್ಯರನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ (ಇಂದು) ಅಮಾನತುಗೊಳಿಸಿದ್ದಾರೆ.
ಈ ಮೂಲಕ ಚಳಿಗಾಲದ ಅಧಿವೇಶನದಲ್ಲಿ ಒಟ್ಟು ಅಮಾನತುಗೊಂಡ ಸಂಸದರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸೋಮವಾರ ಕಲಾಪ ಮುಗಿಯುವವರೆಗೆ ರಾಜ್ಯಸಭೆ ಮತ್ತು ಲೋಕಸಭೆಯಿಂದ ಒಟ್ಟು 92 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಮಂಗಳವಾರ ಅಮಾನತು ಆದವರಲ್ಲಿ ನ್ಯಾಷನಲ್ ಕಾನ್ಸರೆನ್ಸ್ ಫಾರೂಕ್ ಅಬ್ದುಲ್ಲಾ ಹಾಗೂ ಕಾಂಗ್ರೆಸ್ ಮುಖಂಡರಾದ (Congress Leaders) ಶಶಿ ತರೂರ್, ಮನೀಶ್ ತಿವಾರಿ ಅವರೂ ಸೇರಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಬರಬೇಡಿ – ಅಡ್ವಾಣಿ, ಜೋಶಿಯಲ್ಲಿ ಮನವಿ – ಬರಲಿರುವ VIP ಗಣ್ಯರು ಯಾರು?
Advertisement
Advertisement
ಲೋಕಸಭೆಯಲ್ಲಿನ ಭದ್ರತಾ ಲೋಪಕ್ಕೆ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡುವಂತೆ ವಿರೋಧ ಪಕ್ಷಗಳ INDIA ಒಕ್ಕೂಟದ ಸದಸ್ಯರು ಕಳೆದ ಕೆಲ ದಿನಗಳಿಂದ ತೀವ್ರ ಒತ್ತಡ ಹೇರುತ್ತಿದ್ದಾರೆ. ಫಲಕ ಹಿಡಿದು ಮತ್ತು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಶಿಸ್ತಿನ ವರ್ತನೆಗಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಿಂದ ಒಟ್ಟು 141 ಸದಸ್ಯರನ್ನು ಅಮಾನತುಗೊಳಿಸಿದ್ದು, ಇತಿಹಾಸವಾಗಿದೆ.
Advertisement
ಸಂಸತ್ ಭದ್ರತಾ ಲೋಪ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪಟ್ಟು ಹಿಡಿದು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ 79 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿತ್ತು. ಈ ಪೈಕಿ 11 ಸದಸ್ಯರ ನಡವಳಿಕೆ ಪ್ರಕರಣವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದ್ದು, ಆ ವರದಿ ಬರುವವರೆಗೆ ಸದನದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಅಂದು ಪುಲ್ವಾಮಾ, ಇಂದು ಸ್ಮೋಕ್ ಬಾಂಬ್ – ಚುನಾವಣೆ ಬಂದಾಗ ಬಿಜೆಪಿಗರಿಂದ ಗಲಾಟೆ ಸೃಷ್ಟಿ: ಎಸ್.ಆರ್ ಶ್ರೀನಿವಾಸ್
Advertisement
ಅತಿಹೆಚ್ಚು ಸಂಸದರ ಅಮಾನತು:
ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಸಂಸದರನ್ನು ಈ ಬಾರಿ ಅಮಾನತು ಮಾಡಲಾಗಿದೆ. 1989 ರಲ್ಲಿ ಅತಿ ಹೆಚ್ಚು ಸಂಸದರು ಅಮಾನತಾಗಿದ್ದರು. ಅದು ಇದವರೆಗಿನ ದಾಖಲೆಯಾಗಿತ್ತು. ಆ ದಾಖಲೆಯೂ ಬ್ರೇಕ್ ಆಗಿದೆ. ಹಾಗಾದರೆ ಯಾವ್ಯಾವ ಅವಧಿಯಲ್ಲಿ ಎಷ್ಟು ಸಂಸದರ ಅಮಾನತಾಗಿತ್ತು ಎಂಬ ವಿವರ ಇಲ್ಲಿದೆ.
2023ರಲ್ಲಿ 92 ಸಂಸದರು ಅಮಾನತು
ಡಿಸೆಂಬರ್ 13 ರಂದು ಉಂಟಾದ ಭದ್ರತಾ ಲೋಪ ವಿಚಾರವಾಗಿ ಆಡಳಿತ ಪಕ್ಷ ವಿಪಕ್ಷಗಳ ನಡುವೆ ಗದ್ದಲ ನಡೆಯುತ್ತಿದೆ. ಪ್ರತಾಪ್ ಸಿಂಹ ವಿರುದ್ಧ ಕ್ರಮ ಹಾಗೂ ಸದನದಲ್ಲಿ ಅಮಿತ್ ಶಾ ಉತ್ತರ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಡಿಸೆಂಬರ್ 14 ರಂದು ರಾಜ್ಯಸಭೆಯಲ್ಲಿ ಓರ್ವ ಸಂಸದ ಹಾಗೂ ಲೋಕಸಭೆಯಲ್ಲಿ 13 ಸಂಸದರನ್ನ ಅಮಾನತು ಮಾಡಲಾಗಿತ್ತು. ಸೋಮವಾರ 79 ಸಂಸದರನ್ನು ಅಮಾನುಗೊಳಿಸಲಾಗಿತ್ತು. ಮಂಗಳವಾರವಾದ ಇಂದು 49 ಸಂಸದರನ್ನ ಅಮಾನತು ಮಾಡಲಾಗಿದೆ.
1989 – 63 ಸಂಸದರು ಅಮಾನತು
1989 ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 63 ಸಂಸದರನ್ನ ಅಮಾನತುಗೊಳಿಸಲಾಗಿತ್ತು. ಮಾರ್ಚ್ 15, 1989 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಕುರಿತು ತನಿಖೆ ನಡೆಸಿದ್ದ ಠಕ್ಕರ್ ಆಯೋಗದಿಂದ ವರದಿ ಮಂಡನೆ ಮಾಡಲಾಗುತ್ತಿತ್ತು. ಈ ವೇಳೆ ವಿಪಕ್ಷಗಳು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಕಾರಣ 63 ಸಂಸದರನ್ನು ಅಮಾನತು ಮಾಡಲಾಗಿತ್ತು.
2019 – 45 ಸಂಸದರು ಅಮಾನತು
2019 ರಲ್ಲಿ 45 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಎರಡು ದಿನದ ಅವಧಿಯಲ್ಲಿ 45 ಸಂಸದರು ಅಮಾನತುಗೊಂಡಿದ್ದರು. ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಅಂದಿನ ಸ್ಪೀಕರ್ ಸುಮಿತ್ರಾ ಮಹಾಜನ್, ಟಿಡಿಪಿ ಮತ್ತು ಎಐಎಡಿಎಂಕೆಯ 45 ಸಂಸದರನ್ನ ಅಮಾನತು ಮಾಡಿದ್ದರು.
2015- 25 ಸಂಸದರ ಅಮಾನತು
ಕಲಾಪ ನಡೆಯುವ ವೇಳೆ ಪ್ರತಿಭಟನೆ ನಡೆಸಿದ್ದಕ್ಕೆ ಹಾಗೂ ಭಿತ್ತಿಪತ್ರ ತೋರಿ, ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ 25 ಸಂಸದರನ್ನ ಲೋಕಸಭೆಯಲ್ಲಿ ಅಮಾನತುಗೊಳಿಸಲಾಗಿತ್ತು.
2014- 18 ಸಂಸದರ ಅಮಾನತು
2014ರಲ್ಲಿ ತೆಲಂಗಾಣ ರಾಜ್ಯ ಆಂಧ್ರಪ್ರದೇಶದಿಂದ ಬೇರ್ಪಟ್ಟು ನೂತನ ರಾಜ್ಯವಾಗಿತ್ತು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಸಂಸದರು, ತೆಲಂಗಾಣ ವಿಚಾರವಾಗಿ ಕಲಾಪದಲ್ಲಿ ಗದ್ದಲ ಸೃಷ್ಟಿ ಮಾಡಿದ್ದರು. ಈ ಹಿನ್ನೆಲೆ ಸ್ಪೀಕರ್ ಸುಮಿತ್ರಾ ಮಹಾಜನ್ 18 ಸಂಸದರನ್ನು ಅಮಾನತುಗೊಳಿಸಿದ್ದರು.