ಲಕ್ನೋ: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ (Gaziabad) ಜಿಲ್ಲೆಯ ದಾಸ್ನಾ ಜೈಲಿನಲ್ಲಿ ಕನಿಷ್ಠ 140 ಕೈದಿಗಳಿಗೆ ಹೆಚ್‌ಐವಿ (HIV) ದೃಢಪಟ್ಟಿರುವ ಆಘಾತಕಾರಿ ವಿಷಯ ಹೊರಬಿದ್ದಿದೆ.
ಜೈಲಿನಲ್ಲಿ ಒಟ್ಟು 5,500 ಕೈದಿಗಳಿದ್ದಾರೆ. ಆರೋಗ್ಯ ತಪಾಸಣೆ ವೇಳೆ 140 ಕೈದಿಗಳಿಗೆ ಹೆಚ್‌ಐವಿ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ 35 ಕೈದಿಗಳಿಗೆ ಟಿಬಿ ಇರುವುದು ಪತ್ತೆಯಾಗಿದೆ. ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯಿಂದ ಹೆಚ್‌ಐವಿ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವರನ ಕಡೆಯವರು ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ – ಮದುವೆ ಬೇಡವೆಂದ ವಧು
Advertisement
Advertisement
ಆರೋಗ್ಯ ಇಲಾಖೆಯಿಂದ ತನಿಖೆ: ಹೆಚ್‌ಐವಿ ಹರಡಿರುವ ವಿಚಾರ ತಿಳಿಯುತ್ತಿದ್ದಂತೆ ಜೈಲಿನಲ್ಲಿರುವ ಕೈದಿಗಳಲ್ಲಿ ಆತಂಕ ಮನೆ ಮಾಡಿದೆ. ಹೆಚ್‌ಐವಿ ಹರಡಿರುವ ಬಗ್ಗೆ ಆರೋಗ್ಯ ಇಲಾಖೆ ವೈದ್ಯರು ತನಿಖೆ ಕೈಗೊಂಡಿದ್ದಾರೆ.
Advertisement
Advertisement
2018ರಲ್ಲಿ ಇದೇ ಜೈಲಿನಲ್ಲಿ 27 ಕೈದಿಗಳಲ್ಲಿ ಹೆಚ್‌ಐವಿ ದೃಢಪಟ್ಟಿತ್ತು. ಆಗ ಜೈಲಿನಲ್ಲಿ 5,000 ಕೈದಿಗಳಿದ್ದರು. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ- ಸಾಕ್ಷಿ ನಾಶಕ್ಕೆ OLXನಲ್ಲಿ ಫೋನ್ ಮಾರಿದ್ದ ಅಫ್ತಾಬ್!