ಬೆಂಗಳೂರು: ಸಮ್ಮಿಶ್ರ ಸರ್ಕಾರ ಹಾಗೂ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಅವರು ಸಚಿವ ರಮೇಶ್ ಜಾರಕಿಹೊಳಿ ಬ್ರದರ್ಸ್ ಹಠದಂತೆ ಎಂಜಿನಿಯರ್ ಗಳನ್ನೇ ಎತ್ತಂಗಡಿ ಮಾಡಿದ್ದಾರೆ.
ಮೊದಲ ಹಂತವೆಂಬಂತೆ ಪೌರಾಡಳಿತ ಇಲಾಖೆಯ 141 ಅಧಿಕಾರಿಗಳನ್ನ ಒಂದೇ ದಿನದಲ್ಲಿ ಎತ್ತಂಗಡಿ ಮಾಡಿದ್ದಾರೆ. ಇದರಲ್ಲಿ ಪೌರಾಡಳಿತ ಇಲಾಖೆಯ 53 ಮುಖ್ಯಾಧಿಕಾರಿ, 14 ಸಹಾಯಕ ಕಾರ್ಯಪಾಲಕ ಎಂಜಿನಿಯರ್, 6 ಆಯುಕ್ತ, 7 ಯೋಜನಾ ನಿರ್ದೇಶಕರು, 1 ಕಾರ್ಯಪಾಲಕ ಎಂಜಿನಿಯರ್, 8 ಸಮುದಾಯ ಸಂಘಟನಾಧಿಕಾರಿ, 8 ಲೆಕ್ಕಾಧೀಕ್ಷಕರು, 36 ಸಹಾಯಕ ಎಂಜಿನಿಯರ್, 8 ಪರಿಸರ ಎಂಜಿನಿಯರ್‌ಗಳು ಸೇರಿದ್ದಾರೆ.
Advertisement
Advertisement
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಅಭಿವೃದ್ಧಿ ಕೆಲಸ ಮಾಡಲು ಬಿಡಿ. ಕೇವಲ ವಿವಾದವನ್ನೇ ಜೀವಂತ ಇಡುವ ಪ್ರಯತ್ನ ಮಾಡಬೇಡಿ. ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಜಾರಕಿಹೊಳಿ ಬ್ರದರ್ಸ್ ಪರ ಬ್ಯಾಟ್ ಬೀಸಿದ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಜಾರಕಿಹೊಳಿ ಸಹೋದರರ ಜೊತೆ ಕೇವಲ 10 ರಿಂದ 12 ಶಾಸಕರಿಲ್ಲ. ನಾನೂ ಸೇರಿದಂತೆ ಕಾಂಗ್ರೆಸ್ಸಿನ 78 ಶಾಸಕರು ಅವರ ಜೊತೆ ಇದ್ದೇವೆ ಎಂದು ತಿಳಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv