– ನಾಳೆ ರಾತ್ರಿ 8ರ ವರೆಗೆ ಮಾತ್ರ ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶ
ಉಡುಪಿ: ಇಂದು ರಾತ್ರಿಯಿಂದ ಜಿಲ್ಲೆಯ ಎಲ್ಲ ಗಡಿಗಳು ಸೀಲ್ಡೌನ್ ಆಗಲಿದ್ದು, ಜೆಲ್ಲೆಯೊಳಗೆ ಜನಜೀವನ ಯಥಾಸ್ಥಿತಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ಎಲ್ಲ ಜಿಲ್ಲೆಗಳು ಪರಿಸ್ಥಿತಿಗನುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿದರೆ, ಇನ್ನೂ ಕೆಲ ಗಡಿಗಳನ್ನು ಸೀಲ್ ಮಾಡಲಾಗುತ್ತಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳಿರುವ ತಾಲೂಕುಗಳನ್ನಷ್ಟೇ ಲಾಕ್ ಮಾಡಲಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಗಳನ್ನು ಸೀಲ್ ಮಾಡಲು ಆದೇಶಿಸಿದ್ದಾರೆ.
Advertisement
Advertisement
ಮಂಗಳವಾರ ರಾತ್ರಿಯಿಂದ ಉಡುಪಿ ಗಡಿ ಸೀಲ್ಡೌನ್ ಆಗಲಿದ್ದು, ಜಿಲ್ಲೆಯೊಳಗೆ ಕೆಲ ನಿರ್ಬಂಧ ವಿಧಿಸಿಲಾಗಿದೆ. ಆದರೆ ಜನ ಜೀವನ ಯಥಾಸ್ಥಿತಿ ಇರಲಿದೆ. 14 ದಿನಗಳ ಕಾಲ ಉಡುಪಿಯಲ್ಲಿ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಸಂತೆ ಮಾರುಕಟ್ಟೆಗಳನ್ನು ನಡೆಸುವಂತಿಲ್ಲ, ಸಭೆ ಸಮಾರಂಭಕ್ಕೆ ಜಿಲ್ಲೆಯಲ್ಲಿ ಅವಕಾಶ ಇಲ್ಲ, ಮದುವೆಯಲ್ಲಿ 50 ಜನ ಸೇರಿಸಬಹುದು, ಸಾರ್ವಜನಿಕ ಹಬ್ಬ ಆಚರಣೆಗೆ ಅವಕಾಶ ಇಲ್ಲ, ದೇವಸ್ಥಾನ, ಚರ್ಚ್, ಮಸೀದಿಯೊಳಗೆ 20 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಅಲ್ಲದೆ ವಿಶೇಷ ಪೂಜೆಗೆ ಅವಕಾಶ ಇಲ್ಲ. ಸ್ವಯಂ ನಿರ್ಬಂಧಗಳಿಗೆ ಜಿಲ್ಲಾಡಳಿತ ಹೊಣೆಯಲ್ಲ. ಭಾನುವಾರ ಸಂಪೂರ್ಣ ಲಾಕ್ಡೌನ್ ಇರಲಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
Advertisement
Advertisement
ಗಡಿಗಳನ್ನು ಸೀಲ್ಡೌನ್ ಮಾಡುವುದರಿಂದಾಗಿ ತುರ್ತು ವೈದ್ಯಕೀಯ ವಾಹನಗಳಿಗೆ ಮಾತ್ರ ವಿನಾಯಿತಿ ಇದೆ. ಉಳಿದೆಲ್ಲ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಶಾಸಕರು, ಅಧಿಕಾರಗಳು, ಎಸ್ಪಿ ಸಭೆಯಲ್ಲಿ ಭಾಗಿಯಾಗಿದ್ದರು. ಅಂತರ್ ಜಿಲ್ಲೆಗೆ ಹೋಗುವವರಿಗೆ, ಬರುವವರಿಗೆ ನಾಳೆ ರಾತ್ರಿ ಎಂಟು ಗಂಟೆಯವರೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.