ಬೆಂಗಳೂರು: ನಗರದ ಕುಖ್ಯಾತ ರೌಡಿ ರೌಡಿ ಲಕ್ಷ್ಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮಣ ಕೊಲೆಗೆ ಮೊದಲೇ ಸ್ಕೆಚ್ ರೂಪಿಸಿ ಗೋರಿ ಬಳಿ ಆರೋಪಿಗಳು ಮಹಾಪೂಜೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.
ಲಕ್ಷ್ಮಣ ಕೊಲೆಯ ಹಿಂದಿನ ದಿನವೇ ಮಹಾಪೂಜೆ ನಡೆಸಿದ್ದ ಆರೋಪಿಗಳು, ಮಚ್ ಮಂಜನ ಗೋರಿ ಬಳಿ ಆತನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ನಡೆದಿದ್ದ ಮಚ್ ಮಂಜನ ಕೊಲೆಗೆ ಪ್ರತಿಕಾರವಾಗಿಯೇ ಲಕ್ಷ್ಮಣ ಕೊಲೆ ನಡೆಸಿದ್ದಾರೆ. ನಗರದ ಸೋಲೂರು ಬಳಿಯಿ ಮಚ್ ಮಂಜುನ ಗೋರಿ ಇದ್ದು, ಈ ಸ್ಥಳದಲ್ಲೇ ಆರೋಪಿಗಳು ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಟ್ ರಾಜನ ಕಾಲಿಗೆ ಗುಂಡಿಟ್ಟ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಲ್ಲದೇ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಕೊಲೆ ಪ್ರಕರಣದಲ್ಲಿ ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ಮೂಡಿದ್ದು, ಆ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
Advertisement
ಇತ್ತ ಲಕ್ಷ್ಮಣ ಕೊಲೆ ಮಾಡಿದ್ದ ದಿನವೇ 6 ಜನ ಆರೋಪಿಗಳು ಕೂಡ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದ್ದು, ಆದರೆ ಆರೋಪಿಗಳ ಗ್ಯಾಂಗ್‍ನಲ್ಲಿ ಅಂದು ಒಬ್ಬನ ಬರ್ತ್ ಡೇ ಇದ್ದ ಕಾರಣ ಸ್ಥಳದಿಂದ ಪರಾರಿಯಾಗಿದ್ದರು. ಬರ್ತ್ ಡೇ ಆಚರಿಸಿಕೊಂಡ ಬಳಿಕ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಇನ್ನು ಪ್ರಕರಣದಲ್ಲಿ ಗುಂಡೇಟು ತಿಂದಿರುವ ಕ್ಯಾಟ್ ರಾಜನ ವಿರುದ್ಧವೂ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv