ಅನೇಕಲ್: 14 ವರ್ಷದ ಬಾಲಕಿಯನ್ನ 24ರ ಯುವಕನ ಜೊತೆ ಆಕೆಯ ಪೋಷಕರಿಗೆ ತಿಳಿಸದೇ ಬಾಲ್ಯವಿವಾಹ (Child Marriage) ಮಾಡಿಸಿರುವ ಘಟನೆ ಸರ್ಜಾಪುರದಲ್ಲಿ (Sarjapur) ನಡೆದಿದೆ.
ಎಂಟನೇ (Eight) ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಕರೆದೊಯ್ದು ಆಕೆಯ ಪೋಷಕರಿಗೆ ತಿಳಿಸದೆನೇ ಮದುವೆ ಮಾಡಿದ್ದಾರೆ. ಬಾಲಕಿಯ ದೊಡ್ಡಪ್ಪ ಮತ್ತು ದೊಡ್ಡಮ್ಮ ಸೇರಿ 24 ವರ್ಷದ ಯುವಕನ ಜೊತೆ ಕೈವಾರದಲ್ಲಿನ ಯಲ್ಲಮ್ಮ ದೇವಿ ದೇವಾಲಯದಲ್ಲಿ ಮದುವೆ ಮಾಡಿಸಿದ್ದಾರೆ. ಇದನ್ನೂ ಓದಿ: ಏಕಾಏಕಿ ಮಲ್ಲಿಕಾರ್ಜುನ ಖರ್ಗೆಗೆ Z+ ಸೆಕ್ಯೂರಿಟಿ
Advertisement
Advertisement
ಹಲಸಿನಕಾಯಿಪುರ ಗ್ರಾಮದ ವಿನೋದ್ ಕುಮಾರ್ ಎಂಬ ಯುವಕನ ಮದುವೆ ಮಾಡಲಾಗಿದೆ. ವಿನೋದ್ ಕುಮಾರ್ ತಂದೆ ಮುನಿಯಪ್ಪ, ತಾಯಿ ರತ್ನಮ್ಮ, ಅಣ್ಣ ವಿಜಯ್ ಕುಮಾರ್ ಮತ್ತು ಮುನಿಯಪ್ಪ, ವೆಂಕಟಮ್ಮರವರು ಸೇರಿ ಮದುವೆ ಮಾಡಿದ್ದಾರೆ. ಇದನ್ನೂ ಓದಿ: ಲೈಂಗಿಕ ತೃಪ್ತಿಗಾಗಿ ಶಿಶ್ನಕ್ಕೆ ಬಟನ್ ಬ್ಯಾಟರಿ ಸಿಕ್ಕಿಸಿಕೊಂಡು 73ರ ವೃದ್ಧ ಎಡವಟ್ಟು!
Advertisement
ಇದೇ ತಿಂಗಳು 15 ರಂದು ನನ್ನ ಮಗಳನ್ನು ಪುಸಲಾಯಿಸಿ ಮದುವೆ ಮಾಡಿದ್ದಾರೆ. ಮಗಳು ಇನ್ನೂ ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಬಲತ್ಕಾರದ ಮದುವೆ ಮಾಡಿದ್ದಾರೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ. ಜೊತೆಗೆ ಬಾಲಕಿ ತಾಯಿಯ ಅತ್ತೆ, ಬಾವ ಮತ್ತು ಆತನ ಪತ್ನಿ ವಿರುದ್ಧ ಸಹ ದೂರಿದ್ದಾರೆ.ಇದನ್ನೂ ಓದಿ: 284 ಕೇಸ್, 1.40 ಲಕ್ಷ ರೂ. ಫೈನ್ – ಪೊಲೀಸರ ಬಲೆಗೆ ಬಿದ್ದ ಯುವಕ
Advertisement
ನನ್ನ ಮಗಳು ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಬಲತ್ಕಾರದ ಮದುವೆ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಮದುವೆ ಮಾಡಿದ್ದು, ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಅಗ್ರಹಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: 2 ದಶಕಗಳಿಂದ ನಾಪತ್ತೆಯಾಗಿದ್ದ ನಕ್ಸಲ್ ಶ್ರೀಮತಿಗೆ ನ್ಯಾಯಾಂಗ ಬಂಧನ