-ಬಂದವ ಪೊಲೀಸರ ಅತಿಥಿಯಾದ
ನ್ಯೂಯಾರ್ಕ್: 32ರ ವರ್ಷದ ವ್ಯಕ್ತಿಯೊಬ್ಬ 14ರ ಬಾಲೆಯೊಂದಿಗೆ ಸೆಕ್ಸ್ ಹೊಂದಲು ಬರೋಬ್ಬರಿ 350 ಮೈಲು ನಡೆದುಕೊಂಡು ಬಂದು ಪೊಲೀಸರ ಅತಿಥಿಯಾಗಿದ್ದಾನೆ.
ಟಾಮಿ ಲೀ ಜೆನಾಕಿಂಸ್ ಬಂಧಿತ ವ್ಯಕ್ತಿ. ಇಂಡಿಯಾನಾಪೊಲಿಸ್ ಉಪನಗರದಿಂದ ವಿಸ್ಕಾನ್ನಿಸ್ ವರೆಗೆ ನಡೆದುಕೊಂಡು ಬಂದಿದ್ದಾನೆ. ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಲು ಬಂದಾಗ ಪೊಲೀಸರು ಟಾಮಿಯನ್ನು ಬಂಧಿಸಿದ್ದಾರೆ. ಟಾಮಿಗೆ ಬಾಲಕಿ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದಳು. ಫೇಸ್ಬುಕ್ ಚಾಟಿಂಗ್ ನಲ್ಲಿ ಟಾಮಿ ಬಾಲಕಿಗೆ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಮಾತುಗಳನ್ನಾಡುತ್ತಿದ್ದನು.
Advertisement
Advertisement
ಬಾಲಕಿ ದೈಹಿಕ ಸಂಪರ್ಕ ಹೊಂದಲು ಹಿಂದೇಟು ಹಾಕಿದ್ದಳು. ಒಂದು ದಿನ ಟಾಮಿಯೇ ಆಕೆಯನ್ನು ಭೇಟಿಯಾಗಲು ಮತ್ತು ದೈಹಿಕ ಸಂರ್ಪ ಹೊಂದಲು ಬಾಲಕಿ ಬಳಿ ತೆರಳಲು ತೀರ್ಮಾನಿಸಿದ್ದನು. ಬಾಲಕಿಯನ್ನು ಇಂಪ್ರೆಸ್ ಮಾಡುವ ಉದ್ದೇಶದಿಂದ ಟಾಮಿ ನಡೆದುಕೊಂಡು ಹೋಗಲು ಆರಂಭಿಸಿದ್ದನು. ಮಾರ್ಗ ಮಧ್ಯೆ ಕೆಲವು ಸ್ಥಳಗಳಲ್ಲಿ ವಿಶ್ರಾಂತಿ ಪಡೆದು ಬರೋಬ್ಬರಿ 350 ಮೈಲು ನಡೆದು ಬಾಲಕಿಯ ಸ್ಥಳ ತಲುಪಿದ್ದಾನೆ. ಈ ಮಧ್ಯೆ ತಾನು ನಡೆದುಕೊಂಡು ಬರುತ್ತಿರುವ ಫೋಟೋಗಳನ್ನು ಬಾಲಕಿಗೆ ಕಳುಹಿಸಿದ್ದಾನೆ.
Advertisement
Advertisement
ಮೂರು ರಾಜ್ಯಗಳನ್ನು ದಾಟಿ ಬಂದ ಟಾಮಿ ಮೇಲೆ ಸ್ಥಳೀಯ ಪೊಲೀಸರು ಕಣ್ಣಿಟ್ಟಿದ್ದರು. ಬಾಲಕಿಯ ವಾಸವಿರುವ ವೆಲ್ಲ್ಬಾಗ್ ತಲುಪುತ್ತಿದ್ದಂತೆ ಟಾಮಿಯನ್ನ ಬಂಧಿಸಿದ್ದಾರೆ. ಈ ಹಿಂದೆ 8 ಮತ್ತು 7 ವರ್ಷದ ಬಾಲಕರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಜೈಲು ಸೇರಿದ್ದನು. ಜೈಲಿನಿಂದ ಹೊರಬಂದ ಬಳಿಕ ಟಾಮಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೇಲೊಂದು ಕಣ್ಣಿಟ್ಟಿದ್ದರು.