ವಾಷಿಂಗ್‍ಟನ್: 14 ವರ್ಷದ ನ್ಯೂಯಾರ್ಕ್ ಬಾಲಕನೊಬ್ಬ ಪ್ರತಿದಿನ 18 ಗಂಟೆ ವಿಡಿಯೋ ಗೇಮ್ ಆಡಿ ಒಂದು ವರ್ಷಕ್ಕೆ 1.4 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.
ಗ್ರಿಫಿನ್ ಸ್ಪಿಕೋಸಕಿಗೆ ವಿಡಿಯೋ ಗೇಮ್ ಆಡುವುದೆಂದರೆ ತುಂಬಾನೇ ಇಷ್ಟ. ಆತ ದಿನಕ್ಕೆ 18 ಗಂಟೆ ಫೋರ್ಟ್‍ನೈಟ್ ವಿಡಿಯೋ ಗೇಮ್ ಆಡುತ್ತಿದ್ದನು. ವಿಡಿಯೋ ಗೇಮ್ ಆಡುವುದರ ಜೊತೆಗೆ ಗ್ರಿಫಿನ್ ಆ ವಿಡಿಯೋಗಳನ್ನು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡುತ್ತಾನೆ.
Advertisement
ಗ್ರಿಫಿನ್ ಅಪ್ಲೋಡ್ ಮಾಡುವ ವಿಡಿಯೋಗಳಿಂದ ಯೂಟ್ಯೂಬ್‍ನಲ್ಲಿ ಹೆಚ್ಚು ಹಣವನ್ನು ಸಂಪಾದಿಸುತ್ತಾನೆ. ಗ್ರಿಫಿನ್‍ನ ಯೂಟ್ಯೂಬ್ ಚಾನೆಲ್‍ನಲ್ಲಿ ಸುಮಾರು 12 ಲಕ್ಷ ಸಬಸ್ಕ್ರೈಬರ್ ಇದ್ದಾರೆ. ಅಲ್ಲದೆ ಗ್ರಿಫಿನ್‍ನ ವಿಡಿಯೋಗಳಿಗೆ 7.1 ಕೋಟಿ ವ್ಯೂ ಸಿಕ್ಕಿದೆ.
Advertisement
Advertisement
ಗ್ರಿಫಿನ್ ಧ್ಯಾನ ಯಾವಾಗಲೂ ವಿಡಿಯೋ ಗೇಮ್ ಆಡುವುದರಲ್ಲಿ ಇತ್ತು. ವಿಡಿಯೋ ಗೇಮ್‍ನಿಂದ ಆತನಿಗೆ ಇಷ್ಟೊಂದು ಯಶಸ್ಸು ಸಿಕ್ಕಿದೆ ಎಂದು ನಮಗೆ ನಂಬುವುದಕ್ಕೆ ಆಗುತ್ತಿಲ್ಲ. ಅಲ್ಲದೆ ನಮ್ಮ ಮಗನ ಸಂಪಾದನೆ ನೋಡಿ ನಾವು ಆತನಿಗಾಗಿ ಫೈನಾನಿಶಿಯರ್ ಅಡ್ವೈಸರ್ ಹಾಗೂ ಅಕೌಂಟೆಂಟ್ ಕೂಡ ಇಟ್ಟಿದ್ದೇವೆ ಎಂದು ಗ್ರಿಫಿನ್ ಪೋಷಕರು ತಿಳಿಸಿದ್ದಾರೆ.
Advertisement
ಗ್ರಿಫಿನ್ ಮೂರು ವರ್ಷ ಇದ್ದಾಗಲೇ ವಿಡಿಯೋ ಗೇಮ್ ಆಡಲು ಶುರು ಮಾಡಿದ್ದಾನೆ. ವಿಡಿಯೋ ಗೇಮ್ ಮೇಲಿರುವ ಪ್ರೀತಿಯನ್ನು ನೋಡಿ ನಾವು ಆತನನ್ನು ಶಾಲೆಯಿಂದ ಬಿಡಿಸಿದ್ದೇವೆ. ಗ್ರಿಫಿನ್ ಈಗ ಮನೆಯಲ್ಲೇ ಆನ್‍ಲೈನ್ ಮೂಲಕ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಜೊತೆಗೆ ವಿಡಿಯೋ ಗೇಮ್ ಆಡಿ ಕೋಟಿ ರೂ. ಸಂಪಾದಿಸುತ್ತಿದ್ದಾನೆ.
2018ರಲ್ಲಿ ಗ್ರಿಫಿನ್ ಫೋರ್ಟ್‍ನೈಟ್ ವಿಡಿಯೋ ಗೇಮ್‍ನ ಪ್ರಮುಖ ಆಟಗಾರನನ್ನು ಸೋಲಿಸಿ ಆ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಆ ವಿಡಿಯೋ ಸುಮಾರು 75 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿತ್ತು. ಈ ವಿಡಿಯೋದಿಂದ ಗ್ರಿಫಿನ್ 100 ಡಾಲರ್ ಅಂದರೆ ಸುಮಾರು 7,000 ರೂ. ಸಿಕ್ಕಿತ್ತು. ಇದು ಆತನ ಮೊದಲ ಸಂಪಾದನೆ.