ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಯುವನೋರ್ವನನ್ನು ಕಂಬಕ್ಕೆ ಕಟ್ಟಿ ನೂರಾರು ಜನರು ಹಲ್ಲೆ ನಡೆಸಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.
Advertisement
ಜಿಲ್ಲೆಯ ವಿಜಯಪುರ ತಾಲೂಕಿನ ಡೊಮ್ಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ದಲಿತ ಯುವಕ ಹಾಡು ಹಾಕಿ ಅಂದಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ. ಶುಕ್ರವಾರ ಗ್ರಾಮದಲ್ಲಿ ಉರುಸು ನಡೆಯುತ್ತಿತ್ತು. ಕೆಲ ಯುವಕರು ಟ್ರ್ಯಾಕ್ಟರ್‌ನಲ್ಲಿ ಹಾಡುಗಳನ್ನು ಹಾಕಿ ನೃತ್ಯ ಮಾಡುತ್ತಿದ್ದರು. ಈ ವೇಳೆ ಅದೇ ಗ್ರಾಮದ ದಲಿತ ಯುವಕ ಸಾಗರ್ ಕೂಡ ಹೋಗಿ ನೃತ್ಯ ಮಾಡಿದ್ದಾನೆ. ಆಗ ಟ್ರ್ಯಾಕ್ಟರ್‌ನಲ್ಲಿದ್ದ ಸಂಜು ಬಿರಾದಾರ ಹಾಡನ್ನು ಬಂದ್ ಮಾಡಿದ್ದಾನೆ. ನಂತರ ಸಾಗರ್ ಹಾಡು ಹಾಕಿ ನಾನು ನೃತ್ಯ ಮಾಡಬೇಕು ಎಂದು ಕೇಳಿದ್ದಕ್ಕೆ ಸಂಜು ಒಪ್ಪಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಸಾಗರ್ ಮೇಲೆ ಹಲ್ಲೆ ಮಾಡಿ ಕಳುಹಿಸಿದ್ದಾರೆ.
Advertisement
Advertisement
ಮನೆಗೆ ಬಂದ ಸಾಗರ್ ಈ ವಿಷಯವನ್ನು ತನ್ನ ತಮ್ಮನೊಂದಿಗೆ ಹಂಚಿಕೊಂಡಿದ್ದಾನೆ. ಬಳಿಕ ಸಾಗರ್ ತಮ್ಮ ಸಂಜು ಆ್ಯಂಡ್ ಗ್ಯಾಂಗ್ ಜೊತೆಗೆ ಜಗಳವಾಡಿದ್ದಾನೆ. ಇವನೊಂದಿಗೂ ಜಗಳವಾಡಿ, ನಂತರ ಮನೆಯಲ್ಲಿದ್ದ ಸಾಗರ್ ಅನ್ನು ಗ್ರಾಮದ ಕೆಲವರು ಹೊರಗೆ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಾಸರಗೋಡಿನ ದಂತ ವೈದ್ಯನ ಸಾವಿನ ಹಿಂದೆ ಲ್ಯಾಂಡ್ ಜಿಹಾದ್ ಸದ್ದು!
Advertisement
ಮನೆಯಲ್ಲಿದ್ದ ಸಾಗರ್‌ನನ್ನು ಕರೆದುಕೊಂಡು ಹೋಗಲು ಗ್ರಾಮಸ್ಥರು ಬಂದಾಗ ತಾಯಿ ಸಂಗೀತಾ ತಡೆದಿದ್ದಾರೆ. ಅಲ್ಲದೇ ತಪ್ಪಾಗಿದೆ ಬಿಟ್ಟುಬಿಡಿ, ಇನ್ನೊಂದು ಬಾರಿ ಈ ರೀತಿ ಮಾಡಲ್ಲ ಅಂತಾ ಕೈ, ಕಾಲು ಮುಗಿದರು ಬಿಟ್ಟಿಲ್ಲ. ಅಲ್ಲದೇ ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವಾಗಲೂ ಕೂಡ ಕುಟುಂಬಸ್ಥರು ಮತ್ತು ಸಾಗರ್ ಕೂಡ ತಪ್ಪಾಗಿದೆ ಬಿಡಿ ಅಂತ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಜಗ್ಗದ ಗ್ರಾಮಸ್ಥರು ಸಾಗರ್ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನ ಹೆಸರು ಬದಲಾಯಿಸುತ್ತೇವೆ – ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಒಂದು ವೇಳೆ ಸಾಗರ್ ತಪ್ಪು ಮಾಡಿದ್ದರೆ ಪೋಲಿಸರಿಗೆ ವಿಷಯ ತಿಳಿಸಿ ದೂರು ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಕುಟುಂಸ್ಥರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಇದರ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಾಗರ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು 14 ಜನರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಜಿಲ್ಲಾಸ್ಪತ್ರೆಗೆ ದಾಖಲಾಗಿ ಸಾಗರ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ಟಾರೆ ಒಂದು ಹಾಡಿನ ವಿಷಯಕ್ಕೆ ಇಷ್ಟೊಂದು ರಾದ್ಧಾಂತ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಸಾಗರ್ ಕುಟುಂಬಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಸಹೋದರ ಮೊಬೈಲ್ ಪಾಸ್‌ವರ್ಡ್ ಬದಲಾಯಿಸಿದ್ದಕ್ಕೆ ಯುವತಿ ಆತ್ಮಹತ್ಯೆ