ಧಾರವಾಡ: ತಿಂಡಿ ಆಸೆ ತೋರಿಸಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.
ಮಕ್ಕಳ ಹಕ್ಕುಗಳ ಆಯೋಗದಿಂದ ಮಕ್ಕಳ ರಕ್ಷಣಾ ಘಟಕಕ್ಕೆ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬಂದಿತ್ತು. ನಂತರ ಬಾಲಕಿಯನ್ನು ಹುಡುಕಿ ಕರೆತಂದು ಕೌನ್ಸಲಿಂಗ್ ನಡೆಸಿದ್ದು, ಭಿಕ್ಷೆ ಬೇಡುವಾಗ ಆಕೆಯ ಮೇಲೆ ಅತ್ಯಾಚಾರ ಆದ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ಎಗ್‍ರೈಸ್ ಹಾಗೂ ಗೋಬಿ ತಿನ್ನಿಸುವ ಆಸೆ ತೊರಿಸಿ ಅತ್ಯಾಚಾರ ನಡೆಸಲಾಗುತ್ತಿತ್ತು ಎಂದು ಬಾಲಕಿ ಹೇಳಿದ್ದಾಳೆ.
ಇದೇ ಆಧಾರದ ಮೇಲೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಮಲಾ ಅವರು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಬಾಲಕಿಯನ್ನು ನಿರ್ಭಯಾ ಕೇಂದ್ರದಲ್ಲಿ ಇಡಲಾಗಿದ್ದು, ಅತ್ಯಾಚಾರ ನಡೆಸಿದವರು ಯಾರು ಎಂದು ಬಾಲಕಿಗೆ ಗೊತ್ತಿಲ್ಲ. ಆದರೆ ಅವರನ್ನು ನೋಡಿದರೆ ಗುರುತು ಹಿಡಿಯುವದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣ- ಸದನದಲ್ಲಿ ಮಹಿಳಾ ಶಾಸಕಿಯರು ಭಾವುಕ, ಕಣ್ಣೀರು ಹಾಕಿದ ಅಂಜಲಿ ನಿಂಬಾಳ್ಕರ್
ಈ ಹಿಂದೆ ಇದೇ ಬಾಲಕಿಯ ಜೊತೆ ಓರ್ವ ಯುವಕ ಅಸಭ್ಯ ವರ್ತನೆ ಮಾಡುವಾಗ ಸಾರ್ವಜನಿಕರು ಆತನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು. ಈ ಬಗ್ಗೆ ಕೂಡಾ ಪೊಲೀಸರಿಗೆ ಮಾಹಿತಿ ನೀಡಿ, ಯುವಕನನ್ನು ವಿಚಾರಣೆ ನಡೆಸಲು ತಿಳಿಸಲಾಗಿದೆ. ಸದ್ಯ ಉಪನಗರ ಠಾಣೆ ಪೊಲೀಸರು ಆರೋಪಿಗಾಗಿ ಹುಟುಕಾಟ ನಡೆಸಿದ್ದಾರೆ.