ರಾಯ್ಪುರ್: ಛತ್ತೀಸ್‌ಗಢ – ಒಡಿಶಾ ಗಡಿಯಲ್ಲಿ ಛತ್ತೀಸ್‌ಗಢ (Chhattisgarh) ಪೊಲೀಸರು (Police) ನಡೆಸಿದ ಎನ್‌ಕೌಂಟರ್‌ನಲ್ಲಿ (Encounter) ಕನಿಷ್ಠ 14 ನಕ್ಸಲರು (Naxal) ಸಾವನ್ನಪ್ಪಿದ್ದಾರೆ.
ಎನ್‌ಕೌಂಟರ್‌ನಲ್ಲಿ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ಕೂಡ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಎನ್‌ಕೌಂಟರ್ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ 14 ಕ್ಕೂ ಹೆಚ್ಚು ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲೈಟ್‌ನ ಕೇಂದ್ರ ಸಮಿತಿ ಸದಸ್ಯ ಜಯರಾಮ್ ಅಲಿಯಾಸ್ ಚಲಪತಿ ಕೂಡ ಹತರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಎಸ್‌ಎಲ್‌ಆರ್ ರೈಫಲ್‌ನಂತಹ ಸ್ವಯಂಚಾಲಿತ ಬಂದೂಕು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಗರಿಯಾಬಂದ್ ನಿಖಿಲ್ ರಾಖೇಚಾ ಮಾಹಿತಿ ನೀಡಿದ್ದಾರೆ.