ಕಾರವಾರ: ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ (Boat) ಮುಳುಗಡೆಯಾಗಿ (Drown) 14 ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ಭಾಗದ ಆಳ ಸಮುದ್ರದಲ್ಲಿ ನಡೆದಿದೆ.
ಎರಡು ದಿನದ ಹಿಂದೆ ಹೊನ್ನಾವರದ ಕಾಸರಕೋಡಿನಿಂದ (Kasarkod) ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಹೆಚ್.ಎಮ್ ಅಂಗಳೂರು ಎಂಬ ಹೆಸರಿನ ಮೀನುಗಾರಿಕಾ ಬೋಟ್ ತಳಭಾಗದಲ್ಲಿ ಒಡೆದುಹೋಗಿ ಬೋಟ್‌ಗೆ ನೀರು ತುಂಬಿತ್ತು. ಇದನ್ನೂ ಓದಿ: ಚಿನ್ನದ ಗಣಿಯಲ್ಲಿ ಬೆಂಕಿ ದುರಂತ – 27 ಕಾರ್ಮಿಕರು ಸಾವು
Advertisement
Advertisement
ಈ ವೇಳೆ ಅಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದ ಅನಸೂಯ ಎಂಬ ಹೆಸರಿನ ಬೋಟ್ ಮೂಲಕ 14 ಜನ ಮೀನುಗಾರರ ರಕ್ಷಣೆ ಮಾಡಿ ಹೊನ್ನಾವರದ ಕಾಸರಕೋಡ ಬಂದರಿಗೆ ಸುರಕ್ಷಿತವಾಗಿ ಕರೆತರಲಾಗಿದೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು