ಹೈದರಾಬಾದ್: ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಗೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಮತ್ತು 18ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
Advertisement
ಕಡಪ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಚಿತ್ತೂರು ಜಿಲ್ಲೆಯಲ್ಲಿಯೂ ಕೂಡ ಮಳೆಯಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಕಟ್ಟಡ ಕುಸಿತ – ಇಬ್ಬರು ಮಕ್ಕಳ ಸಾವು
Advertisement
Advertisement
ಮಳೆಯಿಂದಾಗಿ ಹಲವಾರು ನದಿಗಳು ಉಕ್ಕಿ ಹರಿಯುತ್ತಿದ್ದು, ರಾಯಲಸೀಮಾ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಕೆಲವು ಸ್ಥಳಗಳಲ್ಲಿ ರಸ್ತೆ ಸಂಚಾರ ವ್ಯವಸ್ಥೆಯನ್ನು ಸಹ ಕಡಿತಗೊಳಿಸಲಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಗಳು ರಾಜಕಾಲುವೆಗಳಾಗಿ ಮಾರ್ಪಡುಗೊಂಡು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
Advertisement
Heavy rain wreaks havoc in Kadapa, Andhra Pradesh
“20 villagers got washed away in floods following heavy rain & breach of Annamayya dam. Out of the 20 people, bodies of 8 people have been recovered, 12 are still missing,” says the district collector. pic.twitter.com/UMnKvQqL4X
— ANI (@ANI) November 19, 2021
ಭಾರೀ ಮಳೆಗೆ 1,544 ಮನೆಗಳಿಗೆ ಹಾನಿಯಾಗಿದ್ದು, 3.4 ಹೆಕ್ಟರ್ ಕೃಷಿ ಕ್ಷೇತ್ರಗಳು ಮುಳುಗಡೆಯಾಗಿವೆ ಮತ್ತು ನೂರಾರು ಜಾನುವಾರುಗಳು ಸಾವನ್ನಪ್ಪಿವೆ. ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸುಮಾರು 8,206.57 ಲಕ್ಷ ಸಾರ್ವಜನಿಕ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
#WATCH | Today, Indian Air Force’s Mi-17 helicopter evacuated ten people stuck in the rising waters of Chitravati river in Ananthapur district, Andhra Pradesh, in difficult weather conditions.
(Video: IAF) pic.twitter.com/jT4qMBgxFl
— ANI (@ANI) November 19, 2021
ಕಡಪಾ ಜಿಲ್ಲೆಯ ರಾಜಂಪೇಟಯ ಚೆಯ್ಯೆರು ಹಳ್ಳದ ಪ್ರವಾಹದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, 12 ಮಂದಿ ಪತ್ತೆಯಾಗಿಲ್ಲ. ಎಸ್‍ಡಿಆರ್‍ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಡಪ ಮತ್ತು ಚಿತ್ತೂರಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹತ್ತಾರು ಮಂದಿಯನ್ನು ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ಕಡಿತಗೊಂಡಿದ್ದ ಆರು ಗ್ರಾಮಗಳಿಗೆ ಎನ್‍ಡಿಆರ್‍ಎಫ್ ತಂಡ ಸಂಪರ್ಕವನ್ನು ಮರುಸ್ಥಾಪಿಸಿದೆ. ಕೊನೆಯದಾಗಿ ಉಳಿದಿರುವ ಒಂದು ಹಳ್ಳಿಯೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಸಿದು ಬಿದ್ದ ಮನೆ ಗೋಡೆ- ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ
PM Narendra Modi: Spoke to Andhra Pradesh CM YS Jagan Mohan Reddy on the situation in the wake of heavy rainfall in parts of the state. Assured all possible support from the Centre. I pray for everyone’s well-being and safety.
(File photo) pic.twitter.com/4p7aWHmiZQ
— ANI (@ANI) November 19, 2021
ರಾಜ್ಯದ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ರಾಜ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಜಗನ್ ಮೋಹನ್ ರೆಡ್ಡಿ ಅವರು ಶನಿವಾರ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.