Bengaluru City
ಗ್ರಾಹಕರೇ ಎಚ್ಚರ ಎಚ್ಚರ – ಮಾರ್ಚ್ ತಿಂಗ್ಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ

ಬೆಂಗಳೂರು: ಬ್ಯಾಂಕ್ ಗ್ರಾಹಕರಿಗೆ ಮಾರ್ಚ್ ತಿಂಗಳಲ್ಲಿ ದೊಡ್ಡ ಹೊಡೆತವೇ ಬೀಳಲಿದೆ. ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ವ್ಯವಹಾರ ಮಾಡುವವರಿಗೆ ಶಾಕ್ ಕಾದಿದೆ. ಯಾಕೆಂದರೆ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ ಇರಲಿದೆ. ಬ್ಯಾಂಕ್ ರಜೆ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರದಲ್ಲಿ ಭಾರೀ ವ್ಯತ್ಯಯ ಆಗುವ ಸಾಧ್ಯತೆ ಇದೆ.
ಮಾರ್ಚ್ ತಿಂಗಳಲ್ಲಿ ಅಂದರೆ ಮುಂದಿನ ತಿಂಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೂರು ದಿನ ಬ್ಯಾಂಕ್ ಮುಷ್ಕರ ಇರಲಿದೆ. ಮಾರ್ಚ್ 11 ರಿಂದ 13 ರವರೆಗೆ ಬ್ಯಾಂಕ್ ಮುಷ್ಕರ ಇದೆ. ಮತ್ತೆ ಹೋಳಿ, ಯುಗಾದಿ ಹಬ್ಬ ಮತ್ತು ಎರಡನೇ ಶನಿವಾರ ಮತ್ತು ಭಾನುವಾರ ಸೇರಿ 14 ದಿನ ಬ್ಯಾಂಕ್ ಸೇವೆ ಇರಲ್ಲ. ಹೀಗಾಗಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಗ್ರಾಹಕರೇ ಗಮನಿಸಿ – ಮಾರ್ಚ್ ನಲ್ಲಿ 6 ದಿನ ತೆರೆಯಲ್ಲ ಬ್ಯಾಂಕ್ ಬಾಗಿಲು
ಬ್ಯಾಂಕ್ ರಜೆ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಹಣದ ಸಮಸ್ಯೆ ಕೂಡ ಎದುರಾಗಲಿದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರು ಬ್ಯಾಂಕ್ ಸೇವೆ ಮಾಡುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ.
ಮಾರ್ಚ್ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕ್ ಏಕೆ ರಜೆ ಅಂತಾ ನೋಡೋದಾದ್ರೆ:
* ಮಾರ್ಚ್ 1 – ಭಾನುವಾರ
* ಮಾರ್ಚ್ 8 – ಭಾನುವಾರ
* ಮಾರ್ಚ್ 9 ಮತ್ತು 10 – ಹೋಳಿ
* ಮಾರ್ಚ್ 11, 12 ಮತ್ತು 13 – ಬ್ಯಾಂಕ್ ಮುಷ್ಕರ
* ಮಾರ್ಚ್ 14 – ಎರಡನೇ ಶನಿವಾರ
* ಮಾರ್ಚ್ 15 – ಭಾನುವಾರ
* ಮಾರ್ಚ್ 22 – ಭಾನುವಾರ
* ಮಾರ್ಚ್ 25 – ಯುಗಾದಿ
* ಮಾರ್ಚ್ 28 – ನಾಲ್ಕನೇ ಶನಿವಾರ
* ಮಾರ್ಚ್ 31 – ಆರ್ಥಿಕ ವರ್ಷದ ಕಡೆ ದಿನ
