ಹುಬ್ಬಳ್ಳಿ: ನೇಹಾ ಹಿರೇಮಠ್ ಹತ್ಯೆ (Neha Hiremath Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಫಯಾಜ್ (Fayaz) ವಿಚಾರಣೆಯನ್ನು ಸಿಐಡಿ (CID) ಮುಗಿಸಿದ್ದು ಕೋರ್ಟ್ 14 ದಿನ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ.
ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ (CID) ಅಧಿಕಾರಿಗಳು ಒಂದನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಅನುಮತಿ ಮೇರೆಗೆ ಆರು ದಿನ ವಶಕ್ಕೆ ಪಡೆದಿದ್ದರು. 6 ದಿನಗಳ ವಿಚಾರಣೆ ಬಳಿಕ ಇಂದು ನ್ಯಾಯಾಲಯದ ಮುಂದೆ ಹಾಜರು ಪಡೆಸಲಾಯಿತು. ಇದನ್ನೂ ಓದಿ: ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ಬಂಧನ ಮಾಡಿದ್ಯಾಕೆ – ಇಡಿಗೆ ಸುಪ್ರೀಂ ಪ್ರಶ್ನೆ
ಸಿಐಡಿ ತನಿಖೆ ವೇಗವಾಗಿ ನಡೆಯುತ್ತಿದ್ದು ಸೋಮವಾರ ಸಿಐಡಿ ಡಿಜಿಪಿ ಹುಬ್ಬಳ್ಳಿಗೆ ಆಗಮಿಸಿ ತನಿಖೆ ವರದಿ ಗಮನಿಸಿದ್ದರು.