ಬೆಂಗಳೂರು: ಎಲ್ಲವನ್ನು ಬಿಟ್ಟು ಒಬ್ಬಳೇ 14 ವರ್ಷದ ಹಿಂದೆ ಬೆಂಗಳೂರಿಗೆ ಬಸ್ ಹತ್ತಿಕೊಂಡು ಬಂದು ನನ್ನ ನೆಲೆ ಕಂಡುಕೊಂಡೆ. 12 ವರ್ಷ ನಾನು ಹಾಸ್ಟೆಲ್‍ನಲ್ಲೇ ಇದ್ದೆ. ತುಂಬಾ ಕಷ್ಟಪಟ್ಟು ಇಲ್ಲಿವರೆಗೂ ಬಂದಿದ್ದೇನೆ ಎಂದು ನಿರೂಪಕಿ ಅನುಶ್ರೀ ಗಳಗಳನೇ ಅತ್ತಿದ್ದಾರೆ. ಇದನ್ನೂ ಓದಿ: ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ
ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅನುಶ್ರೀ, ಕಳೆದ ಒಂದು ವಾರದಿಂದ ನನ್ನ ಬಗ್ಗೆ ಕೆಲವು ಅಭಿಪ್ರಾಯಗಳು, ಬೆಳವಣಿಗೆಗಳು ಸುತ್ತಮುತ್ತ ನಡೆಯುತ್ತಿತ್ತು. ಅಲ್ಲದೇ ಸಿಸಿಬಿ ವಿಚಾರಣೆ ಆದ ಮೇಲೂ ನನ್ನ ಬಗ್ಗೆ ಕೆಲ ಅಭಿಪ್ರಾಯಗಳು ಕೇಳಿ ಬರುತ್ತಿತ್ತು. ಹೀಗಾಗಿ ಇದಕ್ಕೆ ಉತ್ತರ ಕೊಡಬೇಕು ಎಂದು ಲೈವ್ ಬಂದು ಮಾತನಾಡಿದೆ. ಅನೇಕರು ಕಾಲ್ ಮಾಡಿ, ಮೆಸೇಜ್ ಮೂಲಕ ಅನುಶ್ರೀ ಅವರೇ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಿದ್ದರು. ಅವರಿಗೆ ಉತ್ತರಿಸುವುದು ನನ್ನ ಜವಾಬ್ದಾರಿಯಾಗಿತ್ತು ಎಂದು ಹೇಳಿದರು.
Advertisement
Advertisement
ನಾನು, ನನ್ನ ತಾಯಿ ಮತ್ತು ಸಂಬಂಧಿಕರು ಒಂದು ವಾರದಿಂದ ಟೆನ್ಶನ್ ತೆಗೆದುಕೊಂಡಿದ್ದೀವಿ. ಈ ರೀತಿ ನೋಟಿಸ್ ಬರುತ್ತೆ ಎಂದು ನಾವ್ಯಾರು ನಿರೀಕ್ಷಿಸಿರಲಿಲ್ಲ. ಆದರೆ ಬಂದಾಗ ಎಲ್ಲರಿಗೂ ಶಾಕ್ ಆಯಿತು. ಆದರೂ ನಾನೇನು ತಪ್ಪು ಮಾಡಿಲ್ಲ, ವಿಚಾರಣೆ ಕರೆದಿದ್ದಾರೆ ಅಷ್ಟೆ ಎಂದು ಹೋಗಿ ಮಾಹಿತಿ ಕೊಟ್ಟು ಬಂದೆ. ನನಗೆ ಅವರಿಬ್ಬರ ಪರಿಚಯವಿತ್ತು ಸಿಸಿಬಿ, ಮಾಧ್ಯಮಗಳಿಗೂ ಹೇಳಿದ್ದೇನೆ ಎಂದು ಅನುಶ್ರೀ ಹೇಳಿದರು.
Advertisement
Advertisement
ಎಲ್ಲವನ್ನು ಬಿಟ್ಟು ಒಬ್ಬಳೇ 14 ವರ್ಷದ ಹಿಂದೆ ಬೆಂಗಳೂರಿಗೆ ಬಸ್ ಹತ್ತಿಕೊಂಡು ಬಂದು ನನ್ನ ನೆಲೆ ಕಂಡುಕೊಂಡೆ. 12 ವರ್ಷ ನಾನು ಹಾಸ್ಟೆಲ್‍ನಲ್ಲೇ ಇದ್ದೆ. ತುಂಬಾ ಕಷ್ಟಪಟ್ಟು ಇಲ್ಲಿವರೆಗೂ ಬಂದಿದ್ದೇನೆ. ಆದರೆ ಪೊಲೀಸ್ ಎಂದಾಗ ಸಹಜವಾಗಿ ಯಾವ ಹುಡುಗಿಗಾದರೂ ಭಯವಾಗುತ್ತದೆ. ನನಗೂ ಅದೇ ರೀತಿ ಭಯ ಆಯಿತು. ಆದರೆ ನನ್ನ ತಾಯಿ ನನಗೆ ಧೈರ್ಯ ಕೊಟ್ಟರು. ಹೀಗಾಗಿ ವಿಚಾರಣೆಗೆ ಹೋಗಿದ್ದೆ ಎಂದರು.
ನನ್ನ ತಾಯಿಯೇ ನನಗೆ ಶಕ್ತಿ. ನಾವು ಕಷ್ಟಪಟ್ಟು ಮೇಲೆ ಬಂದಿದ್ದೇವೆ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ನಾನು ಮಾಡುವ ಕೆಲಸಕ್ಕೆ ಯಾವತ್ತೂ ಮೋಸ ಮಾಡಿಲ್ಲ. ಹೀಗಾಗಿ ನಾನ್ಯಾಕೆ ಭಯ ಪಡಲಿ ಎಂದು ಧೈರ್ಯವಾಗಿದ್ದೇನೆ. ಆದರೆ ಕೆಲ ಅಭಿಪ್ರಾಯಗಳಿಂದ ಮಾನಸಿಕವಾಗಿ ತುಂಬಾ ಕುಗ್ಗೋದೆ ಎಂದು ಅನುಶ್ರೀ ಗಳಗಳನೇ ಕಣ್ಣೀರು ಹಾಕಿದರು.
ನೋಟಿಸ್ ಬಂದ ವೇಳೆ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮೆಸೇಜ್, ಫೋನ್ ಮೂಲಕ ಧೈರ್ಯ ಹೇಳಿದ್ದರು. ನನಗೆ ಪರಿಚಯ ಇಲ್ಲದವರು, ಅಜ್ಜಿ-ಅಜ್ಜಂದಿರು ಕೂಡ ನೀನು ಭಯಪಡಬೇಡ, ನಿನಗೆ ಏನು ಆಗಲ್ಲ ಎಂದು ಸಮಾಧನಾ ಮಾಡಿದರು. ಅಲ್ಲದೇ ದೇವರಲ್ಲಿ ನನಗಾಗಿ ಹರಕೆ ಕಟ್ಟಿಕೊಂಡು ಪೂಜೆ ಮಾಡಿದ್ದಾರೆ ಎಂದು ಅನುಶ್ರೀ ಕಣ್ಣೀರು ಹಾಕಿದರು.