14 ವರ್ಷದ ಮಗಳನ್ನು ತಾಯಿ ಮಾಡಿದ ನೀಚ ತಂದೆ- ಅಪ್ಪಂದಿರ ದಿನವೇ ಪಾಪಿಯ ಕೃತ್ಯ ಬಯಲು

Public TV
2 Min Read
KPL Rural Police Station

– ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ ಪಾಪಿ

ಕೊಪ್ಪಳ: 14 ವರ್ಷದ ಬಾಲಕಿಯನ್ನು ಆಕೆಯ ತಂದೆಯೇ ಗರ್ಭಿಣಿ ಮಾಡಿರುವ ವಿಕೃತ ಘಟನೆ ನಡೆದಿದ್ದು, ಅಪ್ಪಂದಿರ ದಿನವೇ ಇಂತಹದ್ದೊಂದು ನೀಚ ಕೃತ್ಯ ಬಯಲಿಗೆ ಬಂದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಕೊಪ್ಪಳದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಖಾಸಗಿ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಮಗುವಿಗೆ ಜನ್ಮ ನೀಡಲು ಅವಳ ತಂದೆಯೇ ಕಾರಣ ಎಂದು ತಿಳಿದು ಬಂದಿದೆ. ಕುಡಿದ ಆಮಲಿನಲ್ಲಿ ಮಗಳೊಂದಿಗೆ ದೈಹಿಕ ಸಂಪರ್ಕ ಹೊಂದಿದ 50 ವರ್ಷದ ತಂದೆ ಸ್ವಂತ ಮಗಳಿಗೆ ಮಗು ನೀಡಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಮಗಳಿಗೆ ಹೊಟ್ಟೆ ನೋವೆಂದು ಖಾಸಗಿ ಆಸ್ಪತ್ರೆಗೆ ತಂದೆಯೇ ಕರೆದುಕೊಂಡು ಬಂದಿದ್ದ. ಈ ವೇಳೆ ವೈದ್ಯರಿಗೆ ಇದು ಹೆರಿಗೆ ನೋವು ಎಂದು ತಿಳಿದಿದ್ದು, ಆಗ ನೀಚ ತಂದೆಯ ಕೃತ್ಯ ಬಯಲಾಗಿದೆ. ಏನೂ ಅರಿಯದ ಬಾಲಕಿ ತಂದೆ ಮಾಡಿದ ತಪ್ಪಿಗೆ ತಾಯಿ ಆಗಿದ್ದಾಳೆ.

Police Jeep 1

ಕಳೆದ ಎರಡು ದಿನಗಳ ಹಿಂದೆ ಪಾಪಿ ತಂದೆ ಮಗಳನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಈ ವೇಳೆ ಬಾಲಕಿಯ ವಯಸ್ಸು ಗಮನಿಸಿದ ವೈದ್ಯರು, ಗಂಗಾವತಿ ಶಿಶು ಅಭಿವೃದ್ದಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಆಗಮಿಸಿದ ತಂಡ, ಬಾಲಕಿಯನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಅಪ್ರಾಪ್ತೆ ತಂದೆ ಮಾಡಿದ ಕೆಲಸವನ್ನು ಬಿಚ್ಚಿಟ್ಟಿದ್ದಾಳೆ.

ಕುಟುಂಬ ಗೊಲ್ಲ ಸಮುದಾಯಕ್ಕೆ ಸೇರಿದ್ದರಿಂದ ಒಂದೇ ಊರಲ್ಲಿ ವಾಸ ಮಾಡುತ್ತಿರಲಿಲ್ಲ. ಕಾಡಿನಲ್ಲಿ ಕುರಿ, ದನಕರುಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಆರೋಪಿಯ ಹೆಂಡತಿ, ಮಕ್ಕಳು ವಾಸ ಮಾಡುತ್ತಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿ ಬಂದ ತಂದೆ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನಗಾದ ಅನ್ಯಾಯವನ್ನು ಬಾಲಕಿ ಇದೀಗ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾಳೆ.

police 1 e1585506284178

ಪಾಪಿ ತಂದೆ ಮಗಳಿಗೆ ಬೆದರಿಕೆ ಹಾಕಿದ್ದು, ತಾಯಿಗೆ ವಿಷಯ ಹೇಳಿದರೆ ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದನಂತೆ. ತಂದೆ ಎಸಗಿದ ಕೃತ್ಯಕ್ಕೆ ಇದೀಗ 14 ವರ್ಷದ ಬಾಲಕಿ ತಾಯಿಯಾಗಿದ್ದಾಳೆ. ಬಾಲಕಿ ಹಾಗೂ ತಾಯಿ ವಿಚಿತ್ರ ಘಟನೆ ಕುರಿತು ಅಧಿಕಾರಿಗಳ ಬಳಿ ವಿವರಿಸುತ್ತಿದ್ದಂತೆ, ಪೊಲೀಸರು ಕೂಡಲೇ ರಾಕ್ಷಸ ತಂದೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತಂದೆಯನ್ನು ನ್ಯಾಯ್ಯಾಂಗ ಬಂಧನದಲ್ಲಿಟ್ಟಿದ್ದಾರೆ. ಅಪ್ಪಂದಿರ ದಿನವೇ ಈ ನೀಚ ಕೃತ್ಯ ಬಯಲಿಗೆ ಬಂದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *