ರಾಯ್ಪುರ: ಎರಡು ಮಕ್ಕಳ ತಾಯಿ 14 ವರ್ಷದ ಬಾಲಕನನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆಯೊಂದು ಛತ್ತೀಸ್ ಗಢದ ಕೋರಬಾದದಲ್ಲಿ ನಡೆದಿದೆ.
ಮಹಿಳೆಯ ಪತಿ ಸರ್ಕಾರ ನೌಕರ. ಮನೆಯಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಯೇನೂ ಇರಲಿಲ್ಲ. ಆದರೆ ಮಹಿಳೆಗೆ ಮಾತ್ರ ಮಗನ ವಯಸ್ಸಿನ ಬಾಲಕನ ಮೇಲೆ ಪ್ರೇಮಾಂಕುರವಾಗಿದ್ದು, ಆತನ ಜೊತೆ ಓಡಿ ಹೋಗಿದ್ದಾಳೆ. ಸದ್ಯ ಇಬ್ಬರೂ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಾಗಿದೆ.
ಗಂಟುಮೂಟೆ ಕಟ್ಟಿಕೊಂಡು ಓಡಿ ಹೋಗಿದ್ದರಿಂದ ಆತಂಕಗೊಂಡ ಆಕೆಯ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ಬಾಲಕನ ಮನೆಯವರು ಕೂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎರಡೂ ಕುಟುಂಬದ ಪ್ರಕರಣ ದಾಖಲಿಸಿರುವ ಪೊಲೀಸರು ಇಬ್ಬರ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಅನ್‍ಲಾಕ್ – ಲೋಕಲ್ ರೈಲುಗಳಲ್ಲಿ ಮಹಿಳೆಯರ ಪ್ರಯಾಣಕ್ಕೆ ನಿರ್ಬಂಧ
ಈ ವೇಳೆ ಜೋಡಿ ಜಾಂಜಗೀರ-ಚಂಪಾ ಪ್ರದೇಶದಲ್ಲಿ ಸುತ್ತಾಡುತ್ತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಾಪಸ್ ಕರೆದುಕೊಂಡು ಬಂದಿದ್ದಾರೆ. ಘಟನೆ ಸಂಬಂಧ ಪೊಲೀಸರು ಮಹಿಳೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಬಾಲಕನನ್ನು ಆತನ ಮನೆಯವರಿಗೆ ಒಪ್ಪಿಸಿದ್ದಾರೆ.