ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru-Mysuru Expressway) ಬೈಕ್ (Bike), ಆಟೋ ಹಾಗೂ ಟ್ರ್ಯಾಕ್ಟರ್ ಸೇರಿ ಇತರ ವಾಹನಗಳಿಗೆ ಆ.1ರಿಂದ ನಿಷೇಧ ಹೇರಲಾಗಿದೆ. ಆದರೂ ಜನ ಇದನ್ನು ಲೆಕ್ಕಿಸದೇ ಈ ವಾಹನಗಳನ್ನು ಎಕ್ಸ್‌ಪ್ರೆಸ್‌ವೇಗೆ ಇಳಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು (Police) ತೀವ್ರ ತಪಾಸಣೆ ನಡೆಸಿ ಮೊದಲ ದಿನವೇ 137 ನಿಯಮ ಉಲ್ಲಂಘನೆ ಕೇಸ್ ದಾಖಲಿಸಿಕೊಂಡು 68,500 ರೂ. ದಂಡ ವಸೂಲಿ ಮಾಡಿದ್ದಾರೆ.
ರಾಮನಗರದ 9 ಎಂಟ್ರಿ ಹಾಗೂ ಎಕ್ಸಿಟ್‍ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಹೆದ್ದಾರಿಯಲ್ಲಿ ಬಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ದಂಡ ವಿಧಿಸಿದ್ದಾರೆ. ಬಳಿಕ ದಂಡ ಕಟ್ಟಿದ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡಿದ್ದಾರೆ. ಇಂದು ಸಹ ಪೊಲೀಸರು ಹೆದ್ದಾರಿಯಲ್ಲಿ ನಿಗಾ ವಹಿಸಲಿದ್ದಾರೆ. ಇದನ್ನೂ ಓದಿ: ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್‌ನಲ್ಲಿ ಭಾರೀ ವಂಚನೆ
Advertisement
Advertisement
ದಶಪಥ ಹೆದ್ದಾರಿ ಉದ್ಘಾಟನೆ ಆದಾಗಿನಿಂದ ಹಲವಾರು ಅಪಘಾತಗಳು ನಡೆದಿದ್ದವು. ಈ ಅಪಘಾತದಲ್ಲಿ ಜೀವ ಹಾನಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಯಲು ಬೈಕ್ ಹಾಗೂ ಇತರೆ ವಾಹನಗಳ ಸಂಚಾರವನ್ನು ನಿಷೇಧಿಸಲು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನವನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಮಾನವ ಹಕ್ಕುಗಳ ಹೆಸರಲ್ಲಿ ಮಹಿಳೆಯರಿಗೆ ವಂಚನೆ – ನಾಲ್ವರನ್ನು ಮದುವೆಯಾದವನಿಗೆ ಬಿತ್ತು ಬೀದಿಯಲ್ಲಿ ಗೂಸಾ
Advertisement
Web Stories