ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ನಿನ್ನೆಗಿಂತ ಇನ್ನೂರಕ್ಕೂ ಹೆಚ್ಚು ಕೇಸ್ ಗಳು ಇಳಿಕೆ ಆಗಿವೆ. ಇಂದು 1,333 ಮಂದಿಯಲ್ಲಿ ಪಾಸಿಟಿವ್ ಇರುವುದು ದೃಢವಾಗಿದೆ. ರಾಜ್ಯದಲ್ಲಿ ಒಟ್ಟು 19 ಮಂದಿ ಮಹಾಮಾರಿಗೆ ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ 4,890 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈ ಮೂಲಕ ಇದುವರೆಗೆ ಒಟ್ಟು 38,78,470 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,184 ಇದ್ದು, ಇದುವರೆಗೆ 39,757 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ರೇಟ್ ಪ್ರಮಾಣ 1.59%ಗೆ ಇಳಿದಿದೆ.
ಬೆಂಗಳೂರಿನಲ್ಲಿ ಕೂಡ ಕೊವಿಡ್ ನಿಯಂತ್ರಣದಲ್ಲಿ ಇದ್ದು 705 ಕೇಸ್ ದಾಖಲಾಗಿ 9 ಜನ ಕೊರೊನಾಗೆ ಸಾವನ್ನಪ್ಪಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕೇಸ್ ಇಳಿಕೆಯ ಗ್ರಾಫ್ ಮುಂದುವರಿದಿದ್ದು ರಾಜ್ಯದ ಒಟ್ಟು ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 16184 ಕ್ಕೆ ಇಳಿಕೆ ಆಗಿದೆ. 4890 ಜನ ಡಿಸ್ಸಾರ್ಜ್ ಆಗಿದ್ದಾರೆ. ಇನ್ನೂ ಜಿಲ್ಲೆಗಳಲ್ಲೂ ಕೂಡ ಎರಡಂಕಿಗೆ ದಾಖಲಾಗ್ತಾ ಇದ್ದು ಕೊವಿಡ್ ಕೇಸ್ ನಿಯಂತ್ರಣದಲ್ಲಿ ಇದೆ. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ
ಹೆಲ್ತ್ ಬುಲೆಟಿನ್ ಪ್ರಕಾರ ಬಾಗಲಕೋಟೆ 10, ಬಳ್ಳಾರಿ 41, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 705, ಬೀದರ್ 9, ಚಾಮರಾಜನಗರ 17, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 14, ಚಿತ್ರದುರ್ಗ 29, ದಕ್ಷಿಣ ಕನ್ನಡ 37, ದಾವಣಗೆರೆ 7, ಧಾರವಾಡ 33, ಗದಗ 6, ಹಾಸನ 22, ಹಾವೇರಿ 22, ಕಲಬುರಗಿ 28, ಕೊಡಗು 28, ಕೋಲಾರ 16, ಕೊಪ್ಪಳ 3, ಮಂಡ್ಯ 21, ಮೈಸೂರು 61, ರಾಯಚೂರು 3, ರಾಮನಗರ 13, ಶಿವಮೊಗ್ಗ 25, ತುಮಕೂರು 55, ಉಡುಪಿ 34, ಉತ್ತರ ಕನ್ನಡ 21, ವಿಜಯಪುರ 5 ಹಾಗೂ ಯಾದಗಿರಿಯಲ್ಲಿ 2 ಹೊಸ ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: 2023ರ ಹೊತ್ತಿಗೆ ರಾಮಮಂದಿರ ಉದ್ಘಾಟನೆಗೆ ಸಿದ್ಧ: ಯೋಗಿ ಆದಿತ್ಯನಾಥ್
ಇಂದಿನ 18/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/Sukt8jVTwk @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/BlM7MarnDW
— K'taka Health Dept (@DHFWKA) February 18, 2022