ಅಬುಧಾಬಿ: ಐಪಿಎಲ್ 2020ರ ಟೂರ್ನಿ ಇತಿಹಾಸದಲ್ಲಿ ಅತ್ಯುತ್ತಮ ಟೂರ್ನಿ ಎನಿಸಿಕೊಂಡಿದೆ. ಟೂರ್ನಿ ಲೀಗ್ ಹಂತದ ಪಂದ್ಯಗಳು ಮಂಗಳವಾರ ಅಂತ್ಯವಾಗಲಿದ್ದು, ಮುಂಬೈ ಇಂಡಿಯನ್ಸ್ ತಂಡ ಮಾತ್ರ ಇದುವರೆಗೂ ಪ್ಲೇ ಆಫ್ ಪ್ರವೇಶ ಮಾಡಿದೆ. ಉಳಿದ ಮೂರು ಪ್ಲೇ ಆಫ್ ಸ್ಥಾನಗಳಿಗಾಗಿ ನಾಲ್ಕು ತಂಡಗಳು ಪೈಪೋಟಿ ನಡೆಸುತ್ತಿವೆ. ಇದರೊಂದಿಗೆ ಭಾನುವಾರ 3 ತಂಡಗಳು ಟೂರ್ನಿಯಿಂದ ನಡೆದಿದೆ.
Advertisement
ಐಪಿಎಲ್ ಟೂರ್ನಿಗಳಲ್ಲಿ ಇದೇ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವ ತಂಡ 12 ಅಂಕಗಳನ್ನು ಪಡೆದಿದೆ. 2019ರ ಐಪಿಎಲ್ ಆವೃತ್ತಿಯಲ್ಲಿ ಕೇವಲ 12 ಅಂಕಗಳೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶ ಪಡೆದಿದ್ದು ವಿಶೇಷವಾಗಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶ ಮಾಡದೆ ಟೂರ್ನಿಯಿಂದ ಹೊರ ನಡೆದಿದೆ.
Advertisement
Advertisement
ಶನಿವಾರದವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರತು ಪಡಿಸಿ ಉಳಿದೆ ಎಲ್ಲಾ ತಂಡಗಳು ಪ್ಲೇ ಆಫ್ ರೇಸ್ನಲ್ಲಿ ಸ್ಥಾನ ಪಡೆದಿದ್ದವು. ಆದರೆ ಭಾನುವಾರ ನಡೆದ ಡಬಲ್ ಧಮಾಕಾ ಪಂದ್ಯಗಳಲ್ಲಿ ನಾಲ್ಕು ತಂಡಗಳು ಪೈಪೋಟಿ ನಡೆಸಿದ್ದವು. ಇದರಲ್ಲಿ ಚೆನ್ನೈ ತಂಡ ಗೆಲುವು ಪಡೆದು ತನ್ನೊಂದಿಗೆ ಪಂಜಾಬ್ ತಂಡವನ್ನು ತವರಿಗೆ ಮರಳುವಂತೆ ಮಾಡಿತ್ತು. ಇತ್ತ ಕೋಲ್ಕತ್ತಾ ತಂಡದ ರಾಜಸ್ಥಾನ ವಿರುದ್ಧ ಗೆಲುವು ಪಡೆದು ಆ ತಂಡವನ್ನು ಟೂರ್ನಿಯಿಂದ ಹೊರ ನಡೆಯುವಂತೆ ಮಾಡಿತ್ತು. ಆದರೆ ಈಗಲೂ ಕೋಲ್ಕತ್ತಾ ತಂಡಕ್ಕೆ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶವಿದೆ.
Advertisement
ಲೀಗ್ ಹಂತದಲ್ಲಿ ಅರ್ಧ ಪಂದ್ಯಗಳು ಮುಗಿಯುವ ವೇಳೆ ಟಾಪ್ 3 ರಲ್ಲಿ ಸ್ಥಾನ ಪಡೆದಿದ್ದ ಬೆಂಗಳೂರು, ಡೆಲ್ಲಿ ತಂಡಗಳು ಸತತ ಸೋಲುಗಳೊಂದಿಗೆ ಹಿನ್ನಡೆ ಅನುಭವಿಸಿವೆ. ಉಳಿದಂತೆ ಮುಂಬೈ ತಂಡದ ಸತತ ಗೆಲುವುಗಳೊಂದಿಗೆ ಮೊದಲ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಟೂರ್ನಿಯಲ್ಲಿ ಮುಂಬೈ ತಂಡ ಹೊರತು ಪಡಿಸಿ ಬೇರಾವುದೇ ತಂಡದ ಜರ್ನಿ ಸುಲಭವಾಗಿರಲಿಲ್ಲ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂತಿಮ 4 ತಂಡಗಳು ಕೂಡ 12 ಅಂಕಗಳನ್ನು ಪಡೆದಿರುವುದು ಪ್ರಮುಖ ಸಾಕ್ಷಿಯಾಗಿದೆ.
ಸದ್ಯ ಮುಂಬೈ ಇಂಡಿಯನ್ಸ್ ತಂಡ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದ್ದು, ಪ್ಲೇ ಆಫ್ ಪಂದ್ಯಗಳ ಆರಂಭದ ಬಳಿಕ ಟೂರ್ನಿ ಮತ್ತಷ್ಟು ಹೈ ವೋಲ್ಟೇಜ್ ಪಂದ್ಯಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.