ಭೋಪಾಲ್: ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 1.10 ಕೋಟಿ ರೂ.ಗೆ ಬಿಕರಿಯಾಗಿ ಇತಿಹಾಸ ಸೃಷ್ಟಿಸಿದ 13 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಇದೀಗ ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಜಯ್ ಹಜಾರೆ ಟ್ರೋಫಿ (ದೇಶೀಯ ಏಕದಿನ ಪಂದ್ಯ) ಪಂದ್ಯವನ್ನಾಡಿದ ವಿಶೇಷ ಸಾಧನೆಗೆ ಪಾತ್ರರಾದರು. 1999-2000 ಇಸವಿಯ ಋತುವಿನಲ್ಲಿ ಅಲಿ ಅಕ್ಬರ್ 14 ವರ್ಷ, 51 ದಿನಗಳ ವಯಸ್ಸಿನವರಾಗಿದ್ದಾಗ ವಿದರ್ಭ ಪರವಾಗಿ ಪಂದ್ಯವನ್ನಾಡಿದ್ದರು. ಈ ಮೂಲಕ ವಿಜಯ್ ಹಜಾರೆ ಟ್ರೋಫಿಗೆ (Vijay Hazare Trophy) ಪದಾರ್ಪಣೆ ಮಾಡಿದ್ದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೀಗ ವೈಭವ್ ಸೂರ್ಯವಂಶಿ 13 ವರ್ಷ, 269 ದಿನಗಳಿದ್ದಾಗ ದೇಶಿಯ ಕ್ರಿಕೆಟ್ ಟ್ರೋಫಿಯನ್ನಾಡಿ ಗಮನ ಸೆಳೆದಿದ್ದಾರೆ.
Advertisement
Advertisement
ಶನಿವಾರ ಬಿಹಾರ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ (Madhya Pradesh) ತಂಡದ ಪರ ಆಡಿದ್ದಾರೆ. ವೈಭವ್ ಸೂರ್ಯವಂಶಿ ಆರಂಭಿಕನಾಗಿ ಕಣಕ್ಕಿಳಿದು ಕೇವಲ 4 ರನ್ ಗಳಿಸಿ ಔಟಾಗಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಬಿಹಾರ ತಂಡ 46.4 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ್ದ ಮಧ್ಯಪ್ರದೇಶ ತಂಡ ಕೇವಲ 25.1 ಓವರ್‌ಗಳಲ್ಲೇ 197 ರನ್ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್ ಡ್ರಾನಲ್ಲಿ ಅಂತ್ಯ; WTC ಫೈನಲ್ ರೇಸ್‌ನಲ್ಲಿ ಉಳಿದ ಭಾರತ
Advertisement
Advertisement
5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್, 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬಿಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಆಡಿದ್ದಾರೆ. 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC
2023 ರಲ್ಲಿ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಸಿಡಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.
ಸೂರ್ಯವಂಶಿ ಈವರೆಗೆ ಒಟ್ಟು 49 ಶತಕಗಳನ್ನು ಸಿಡಿಸಿದ್ದಾರೆ. ಇದರಿಂದಲೇ ವೈಭವ್ ಹೆಸರು ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು. ಬಳಿಕ 1.10 ಕೋಟಿ ರೂ.ಗಳಿಗೆ ವೈಭವ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಸೇರಿದಂತೆ ರಾಷ್ಟ್ರೀಯ ತಂಡದ ಆಟಗಾರರು ಇರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ವೈಭವ್ ಸಹ ಆಡುತ್ತಿರುವುದು ವಿಶೇಷ. ಇದನ್ನೂ ಓದಿ: ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!