ಕೋಲ್ಕತ್ತಾ: ತಮ್ಮನ ಎದುರೇ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆಗೈದ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ಲಾಲ್ ಬಂಧ್ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 19 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
- Advertisement
ಘಟನೆ ವಿವರ: 13 ವರ್ಷದ ಬಾಲಕಿ ಇಂದು ಮುಂಜಾನೆ ತನ್ನ 10 ವರ್ಷದ ತಮ್ಮನೊಂದಿಗೆ ಬಹಿರ್ದೆಸೆಗಾಗಿ ಮನೆಯಿಂದ ಹೊರಗಡೆ ಬಂದಿದ್ದಳು. ಈ ವೇಳೆ ಅದೇ ಪ್ರದೇಶದ ಕಾಮುಕ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಾತ್ರವಲ್ಲದೇ ಆಕೆಯ ದುಪ್ಪಟ್ಟದಿಂದಲೇ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
- Advertisement
ನಡೆದ ಘಟನೆಯನ್ನು ಮೃತಳ ತಮ್ಮ ಬಂಕಾಪುರದ ಎಸ್ ಪಿ ಸುಖೆಂದು ಹಿರಾ ಅವರಿಗೆ ವಿವರಿಸಿದ್ದಾನೆ. ಬಾಲಕ ನೀಡಿದ ಮಾಹಿತಿಯಂತೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆಯ ವೇಳೆ ಆರೋಪಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.