ಲಕ್ನೋ: ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು (Police) ವ್ಯಕ್ತಿಯೊಬ್ಬನನ್ನು ಗಾಜಿಯಾಬಾದ್‍ನಲ್ಲಿ (Ghaziabad) ಬಂಧಿಸಿದ್ದಾರೆ.
ತನ್ನೊಂದಿಗೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ 13 ವರ್ಷದ ಬಾಲಕನನ್ನು ಅಂಗಡಿಯ ಮಹಡಿ ಮೇಲೆ ಕರೆದೊಯ್ದು ಇಬ್ಬರು ದೌರ್ಜನ್ಯ ಎಸಗಿದ್ದಾರೆ. ಅದರಲ್ಲಿ ಓರ್ವನನ್ನು ಬಂಧಿಸಲಾಗಿದೆ. ಮತ್ತೋರ್ವನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಅವ್ಯವಸ್ಥೆ – ಬಸ್ ತಡೆದು ದೊಡ್ಡಬಳ್ಳಾಪುರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಜುಲೈ 7 ರಂದು ಈ ಘಟನೆ ನಡೆದಿದೆ. ಮದ್ಯಾಹ್ನದ ವೇಳೆಗೆ ಉಳಿದ ಕೆಲಸಗಾರರು ಅಂಗಡಿಯ ಒಳಗಿದ್ದಾರು. ಈ ವೇಳೆ ಆರೋಪಿಗಳಾದ ಚುನೂ ಮತ್ತು ಮುನೂ ಬಾಲಕನನ್ನು ಮಹಡಿಗೆ ಕರೆದೊಯ್ದಿದ್ದಾರೆ. ಬಳಿಕ ಆತನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಚುನೂ ಮತ್ತು ಮುನೂ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರೋಪಿ ಚುನೂನನ್ನು ಬಂಧಿಸಲಾಗಿದೆ. ಮುನೂ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೈನ ಮುನಿ ಹತ್ಯೆ ಹಿಂದೆ ಐಸಿಸ್ ಚಿತಾವಣೆಯಿದೆ – ಶಾಸಕ ಸಿದ್ದು ಸವದಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]