– ಫ್ಯಾಮಿಲಿ ಕಳೆದುಕೊಂಡ 13ರ ಬಾಲಕನಿಂದಲೇ ಕೊಲೆಗಾರನಿಗೆ ಗುಂಡೇಟು
ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಒಂದೇ ಕುಟುಂಬದ 13 ಜನರನ್ನು ಕೊಂದ ಹಂತಕ ಮಂಗಲ್ ಎಂಬಾತನನ್ನು ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಗುಂಡಿಟ್ಟು ಹತ್ಯೆ ಮಾಡಿಸಲಾಗಿದೆ.
ಅಫ್ಘಾನ್ ಸುಪ್ರೀಂ ಕೋರ್ಟ್ ಆದೇಶ ಮತ್ತು ತಾಲಿಬಾನ್‌ನ ಸರ್ವೋಚ್ಛ ನಾಯಕ ಹಿಬತುಲ್ಲಾ ಅಖುಂಜಾದಾ ಅನುಮೋದಿಸಿದ ಸಾರ್ವಜನಿಕ ಮರಣದಂಡನೆಯನ್ನು ಸುಮಾರು 80,000 ಜನರು ವೀಕ್ಷಿಸಿದ್ದಾರೆ. ಇದನ್ನೂ ಓದಿ: ಸ್ಲೋವಾಕಿಯಾದಲ್ಲಿರುವ ಕರ್ನಾಟಕದ ಉದ್ಯೋಗಿಗಳೊಂದಿಗೆ ಡಾ. ಶರಣಪ್ರಕಾಶ್ ಪಾಟೀಲ್ ಸಂವಾದ
ಮೊದಲಿಗೆ ಕೊಲೆಗಾರನನ್ನು ಮೈದಾನಕ್ಕೆ ಕರೆತಂದು, ವೈದ್ಯರು ತಪಾಸಣೆ ನಡೆಸಿದ ಬಳಿಕ ಗುಂಡಿಟ್ಟು ಕೊಲ್ಲಿಸಲಾಗಿದೆ. ಖೋಸ್ಟಾ ಎಂಬ ನಗರದಲ್ಲಿ ಅಬ್ದುಲ್ ರೆಹಮಾನ್, ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಅಪರಾಧಕ್ಕಾಗಿ ಮಂಗಲ್‌ಗೆ ಮರಣದಂಡನೆ ವಿಧಿಸಲಾಗಿತ್ತು.
2021ರಲ್ಲಿ ತಾಲಿಬಾನ್ ಸರ್ಕಾರ ಬಂದ ಬಳಿಕ ವಿಧಿಸಿರುವ 11ನೇ ಮರಣದಂಡನೆ ಇದಾಗಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಜೀವಂತವಾಗಿದ್ದಾರೆ, ಅವ್ರಿಗೆ ಮಾನಸಿಕ ಹಿಂಸೆ ಕೊಡ್ತಿದ್ದಾರೆ: ಸಹೋದರಿ ಖಾನಮ್ ಬೇಸರ

